ಬಸ್ ಢಿಕ್ಕಿ; ಕಾರು ಚಾಲಕ ಮೃತ್ಯು
ಕಾರ್ಕಳ, ಜೂ. 26: ಬಸ್ಸೊಂದು ಢಿಕ್ಕಿ ಹೊಡೆದು ಕಾರು ಚಾಲಕ ಮೃತಪಟ್ಟ ಘಟನೆ ತಾಲೂಕಿನ ನಲ್ಲೂರು ಗ್ರಾಮದ ಕಟ್ಟೆ ಎಂಬಲ್ಲಿ ರವಿವಾರ ನಡೆದಿದೆ. ಮೃತರನ್ನು ಕಾರು ಚಾಲಕ ಆಸೀಫ್ (25) ಎಂದು ಗುರುತಿಸಲಾಗಿದೆ.
ಕಾರ್ಕಳ ಕಡೆಯಿಂದ ಬೆಳ್ತಂಗಡಿಯತ್ತ ತೆರಳುತಿದ್ದ ಮಾರುತಿ 800 ಕಾರಿಗೆ ಬೆಳ್ತಂಗಡಿ ಕಡೆಯಿಂದ ಅತೀವೇಗ ಹಾಗೂ ನಿರ್ಲಕ್ಷದಿಂದ ಚಲಾಯಿಸಿಕೊಂಡ ಬಂದ ಖಾಸಗಿ ಬಸ್‌ನ ಚಾಲಕ ರಸ್ತೆಯ ತೀರಾ ಬಲಬದಿಗೆ ಬಂದು ಎದುರಿನಿಂದ ಬರುತಿದ್ದ ಕಾರಿಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ತಲೆಗೆ ತೀವ್ರ ಪೆಟ್ಟಾದ ಚಾಲಕ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿರುವುದಾಗಿ ಕಾರ್ಕಳ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.
Next Story





