ಪ್ರತ್ಯೇಕ ಘಟನೆ: ಇಬ್ಬರು ನಾಪತ್ತೆ
ಕುಂದಾಪುರ, ಜೂ.26: ವಡೇರಹೋಬಳಿ ಗ್ರಾಮದ ನಾನಾ ಸಾಹೇಬ್ ರಸ್ತೆ ನಿವಾಸಿ ರವಿ ಎಂಬವರ ಪುತ್ರ, ಎಸೆಸೆಲ್ಸಿಯಲ್ಲಿ ಕಲಿಯುತಿದ್ದ ತೇಜ (17) ಎಂಬ ಬಾಲಕ ಜೂ.10ರಂದು ಬೆಳಗ್ಗೆ ಮನೆಯಿಂದ ಹೊರಹೋದವನು ಈವರೆಗೆ ಮನೆಗೆ ಮರಳದೇ ನಾಪತ್ತೆಯಾಗಿರುವುದಾಗಿ ತಂದೆ ರವಿ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಾಲಕಿ ನಾಪತ್ತೆ: ತಲ್ಲೂರು ಗ್ರಾಮದ ನೀಲಗಿರಿ ಫ್ಲಾಟ್ ಬಳಿ ವಾಸವಾಗಿರುವ ಲಲಿತಾ ಎಂಬವರ ಪುತ್ರಿ ವನಿತಾ (17) ಜೂ.10ರಂದು ಬೆಳಗ್ಗೆ 8:00ಗಂಟೆಗೆ ಹೊರ ಹೋದವರು ಈವರೆಗೂ ಮರಳಿ ಬರದೇ ನಾಪತ್ತೆಯಾ ಗಿರುವುದಾಗಿ ತಾಯಿ ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Next Story





