ಬಿದ್ದು ಸಿಕ್ಕಿದ ಪರ್ಸನ್ನು ಪೊಲೀಸರಿಗೊಪ್ಪಿಸಿ ಪ್ರಾಮಾಣಿಕತೆ ಮೆರೆದ ಯುವಕ
ಕುಂಜತ್ತೂರು, ಜೂ. 26: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬಿದ್ದು ಸಿಕ್ಕಿದ ನಗದು ಹಾಗೂ ದಾಖಲೆ ಪತ್ರಗಳನ್ನೊಳಗೊಂಡ ಪರ್ಸನ್ನು ಮಂಜೇಶ್ವರ ಪೊಲೀಸ್ ಠಾಣೆಗೊಪ್ಪಿಸಿ ಯುವಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾನೆ.
ಉದ್ಯಾವರ 10 ನೆ ಮೈಲು ನಿವಾಸಿ ಸೇಟ್ ಹೌಸ್ ಆಹ್ಮದ್ ಎಂಬವರ ಪುತ್ರ ತನ್ವೀರ್ ಎಂಬಾತನಿಗೆ ಸೋಮಾವರ ಸಂಜೆ 5:30 ರ ಸುಮಾರಿಗೆ ಪೊಸೋಟು ಸೇತುವೆ ಪರಿಸರದಲ್ಲಿ ಪರ್ಸೊಂದು ಬಿದ್ದು ಸಿಕ್ಕಿದ್ದು, ಅದರಲ್ಲಿ ಎಂಟು ಸಾವಿರ ರೂ. ನಗದು ಹಾಗೂ ಇತರ ದಾಖಲೆ ಪತ್ರಗಳಿತ್ತು. ಕೂಡಲೇ ಈತ ಇದನ್ನು ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ. ಇದರ ವಾರೀಸುದಾರರು ಸರಿಯಾದ ಗುರುತು ಹೇಳಿ ಮಂಜೇಶ್ವರ ಠಾಣೆಯಿಂದ ಪಡೆದುಕೊಳ್ಳಬಹುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.
Next Story





