ಪಾಕ್ ಸ್ಪಿನ್ನರ್ ವಸೀಂ ನಂ.1 ಟ್ವೆಂಟಿ-20 ಬೌಲರ್

ದುಬೈ,ಜೂ.26: ಪಾಕಿಸ್ತಾನದ ಎಡಗೈ ಸ್ಪಿನ್ನರ್ ಇಮಾದ್ ವಸೀಂ ಅವರು ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ನಂ.1 ಬೌಲರ್ ಆಗಿ ಹೊರ ಹೊಮ್ಮಿದ್ದಾರೆ.
ನಂ.1 ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕದ ಸ್ಪಿನ್ನರ್ ಇಮ್ರಾನ್ ತಾಹಿರ್ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ 3ನೆ ಸ್ಥಾನಕ್ಕೆ ಕುಸಿದಿದ್ದಾರೆ. ಜನವರಿಯಲ್ಲಿ ತಾಹಿರ್ ನಂ.1 ಸ್ಥಾನಕ್ಕೇರಿದ್ದರು.
ಭಾರತದ ಜಸ್‌ಪ್ರಿತ್ ಬುಮ್ರಾ ಟಿ-20 ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ 2ನೆ ಸ್ಥಾನಕ್ಕೇರಿದ್ದಾರೆ.
ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆ್ಯರೊನ್ ಫಿಂಚ್ ಹಾಗೂ ಕೇನ್ ವಿಲಿಯಮ್ಸನ್ 2 ಹಾಗೂ 3ನೆ ಸ್ಥಾನದಲ್ಲಿದ್ದಾರೆ.
ದಕ್ಷಿಣ ಆಫ್ರಿಕ ವಿರುದ್ಧ ಟ್ವೆಂಟಿ-20 ಸರಣಿ ಜಯಿಸಿರುವ ಇಂಗ್ಲೆಂಡ್ ಟೀಮ್ ರ್ಯಾಂಕಿಂಗ್‌ನಲ್ಲಿ ಎರಡನೆ ಸ್ಥಾನಕ್ಕೇರಿದೆ.
Next Story





