ಸುಪ್ರೀಂ ಆದೇಶ ಅನುಷ್ಠಾನಕ್ಕೆ ಸಮಿತಿ ರಚಿಸಲು ಬಿಸಿಸಿಐ ನಿರ್ಧಾರ

ಮುಂಬೈ, ಜೂ.26: ಸುಪ್ರೀಂಕೋರ್ಟ್‌ನ ಆದೇಶವನ್ನು ಹೇಗೆ ಉತ್ತಮವಾಗಿ ಹಾಗೂ ಕ್ಷಿಪ್ರವಾಗಿ ಅನುಷ್ಠಾನಕ್ಕೆ ತರಬಹುದು ಎಂದು ವಿಶ್ಲೇಷಿಸಲು ಐದರಿಂದ ಆರು ಸದಸ್ಯರನ್ನು ಒಳಗೊಂಡ ಸಮಿತಿಯೊಂದನ್ನು ಶೀಘ್ರವೇ ರಚಿಸಲು ಬಿಸಿಸಿಐ ತನ್ನ ವಾರ್ಷಿಕ ಮಹಾಸಭೆಯಲ್ಲಿ ನಿರ್ಧರಿಸಿದೆ. ಬಿಸಿಸಿಐನ ಈ ಹೆಜ್ಜೆಯಿಂದಾಗಿ ಲೋಧಾ ಸಮಿತಿಯ ಸುಧಾರಣೆ ಜಾರಿಯಾಗುವುದು ಮತ್ತಷ್ಟು ವಿಳಂಬವಾಗುವ ನಿರೀಕ್ಷೆಯಿದೆ.
ವಿವಾದಾತ್ಮಕ ಮಾಜಿ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಭಾಗಿಯಾಗಿದ್ದ ಬಿಸಿಸಿಐನ ವಿಶೇಷ ಸಾಮಾನ್ಯ ಸಭೆಯು ಎರಡು ಗಂಟೆ ಹಾಗೂ 45 ನಿಮಿಷಗಳ ಕಾಲ ನಡೆಯಿತು.
2014ರಲ್ಲಿ ಬಿಸಿಸಿಐ ಪತ್ರವೊಂದಕ್ಕೆ ಸಹಿ ಹಾಕಿರುವ ಆಧಾರದಲ್ಲಿ ನಾವು ಪಿಸಿಬಿಯನ್ನು ಭೇಟಿಯಾಗಿದ್ದೆವು. ಆ ಭೇಟಿಯ ಅಗತ್ಯವೂ ನಮಗಿತ್ತು. ನಮ್ಮ ನಿರ್ಧಾರದಲ್ಲಿ ಬದಲಾವಣೆಯಿಲ್ಲ. ಕೇಂದ್ರ ಸರಕಾರ ಅನುಮತಿ ನೀಡಿದರೆ ಮಾತ್ರ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ಆಡುತ್ತೇವೆ ಎಂದು ಬಿಸಿಸಿಐನ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಸಭೆಯ ಬಳಿಕ ತಿಳಿಸಿದ್ದಾರೆ.
Next Story





