ವೈಕಂ ಸಾಮೂಹಿಕ ಆತ್ಮಹತ್ಯೆ ಪ್ರಕರಣ: ಗಂಭೀರ ಸ್ಥಿತಿಯಲ್ಲಿದ್ದ ಬಾಲಕ ನಿಧನ

ವೈಕಂ(ಕೇರಳ), ಜೂನ್ 27: ಕಳೆದ ದಿವಸ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಶ್ರಮಿಸಿದ ಒಂದೇ ಕುಟುಂಬದ ನಾಲ್ವರಲ್ಲಿ ಬದುಕುಳಿದಿದ್ದ ಬಾಲಕ ಕೂಡಾ ಮೃತಪಟ್ಟಿದ್ದಾನೆ. ಇಂದು ಬೆಳಗ್ಗೆ ಹದಿನೊಂದು ವರ್ಷ ವಯಸ್ಸಿನ ಶ್ರೀಹರಿ ನಿಧನನಾಗಿದ್ದಾನೆ. ತಂದೆ ಚಿಲ್ಲಕ್ಕಲ್ ಸುರೇಶ್(45), ಅಮ್ಮ ಸೋಜಾ(38), ಸಹೋದರ ಸೂರಜ್(4) ನಿನ್ನೆಯೇ ಮೃತಪಟ್ಟಿದ್ದರು. ಗಂಭೀರ ಸುಟ್ಟಗಾಯಗಳಾಗಿದ್ದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದ್ದ ಶ್ರೀಹರಿಯಿಂದ ವೈಕಂ ಒಂದನೆ ದರ್ಜೆ ಮ್ಯಾಜಿಸ್ಟ್ರೇಟ್ ಸಾಕ್ಷಿ ಪಡೆದುಕೊಂಡಿದ್ದರು.
ನಿನ್ನೆ ಬೆಳಿಗ್ಗೆ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂಡಿತ್ತು ಎಂದು ಪೊಲೀಸರ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಸುರೇಶ್‌ಗೆ ಸಾಲವಿತ್ತು ಎಂದು ಊರವರು ತಿಳಿಸಿದ್ದಾರೆ.
Next Story





