Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಖಾಸಗಿ ಭಾಗಕ್ಕೆ ಲಾಠಿಯಿಂದ ತಿವಿದು ಮಹಿಳಾ...

ಖಾಸಗಿ ಭಾಗಕ್ಕೆ ಲಾಠಿಯಿಂದ ತಿವಿದು ಮಹಿಳಾ ಕೈದಿಯನ್ನು ಕೊಂದ ಜೈಲರ್ ಗಳು

ವಾರ್ತಾಭಾರತಿವಾರ್ತಾಭಾರತಿ27 Jun 2017 1:11 PM IST
share
ಖಾಸಗಿ ಭಾಗಕ್ಕೆ ಲಾಠಿಯಿಂದ ತಿವಿದು ಮಹಿಳಾ ಕೈದಿಯನ್ನು ಕೊಂದ ಜೈಲರ್ ಗಳು

ಮುಂಬೈ, ಜೂ. 27: ಇಲ್ಲಿನ ಬೈಕುಲ್ಲ ಕಾರಾಗೃಹದ ಜೈಲರುಗಳು 38 ವರ್ಷದ ಮಹಿಳಾ ಕೈದಿಯೊಬ್ಬರನ್ನು ಅಮಾನುಷವಾಗಿ ಲಾಠಿಯಿಂದ ಆಕೆಯ ಖಾಸಗಿ ಭಾಗಕ್ಕೆ ತಿವಿದು ಆಕೆಯನ್ನು ಕೊಂದ ಘಟನೆಯೊಂದು ವರದಿಯಾಗಿದೆ.

ಬೆಳಗ್ಗಿನ ರೇಶನ್ ನಲ್ಲಿ ಎರಡು ಮೊಟ್ಟೆಗಳು ಹಾಗೂ ಐದು ಪಾವ್ ತುಂಡುಗಳು ಕಾಣುತ್ತಿಲ್ಲ ಎಂದು ದೂರಿದ್ದೇ ಆಕೆಯ ಮೇಲೆ ಈ ಅಮಾನುಷ ದೌರ್ಜನ್ಯಕ್ಕೆ ಕಾರಣವೆಂದು ಪ್ರತ್ಯಕ್ಷದರ್ಶಿ ಸಾಕ್ಷಿಯೊಬ್ಬರು ಸಲ್ಲಿಸಿದ ದೂರಿನ ಆಧಾರದಲ್ಲಿ ದಾಖಲಾದ ಎಫ್ ಐ ಆರ್ ನಲ್ಲಿ ಹೇಳಲಾಗಿದೆ. ಈ ಘಟನೆಯ ಸಂಬಂಧ ಆರು ಮಂದಿ ಜೈಲರುಗಳ ವಿರುದ್ಧ ಕೊಲೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಮೃತ ಕೈದಿಯನ್ನು ಮಂಜುಳಾ ಶೆಟ್ಯೆ ಎಂದು ಗುರುತಿಸಲಾಗಿದೆ.

ಈ ಘಟನೆಯ ನಂತರ ಜೈಲಿನಲ್ಲಿ ಕೈದಿಗಳು ಹಿಂಸಾತ್ಮಕ ಪ್ರತಿಭಟನೆಗಿಳಿದಿದ್ದು, ತನ್ನ ಪುತ್ರಿ ಶೀನಾ ಬೋರಾ ಕೊಲೆ ಪ್ರಕರಣ ಸಂಬಂಧ ಜೈಲಿನಲ್ಲಿರುವ ಮಾಜಿ ಸೆಲೆಬ್ರಿಟಿ ಇಂದ್ರಾಣಿ ಮುಖರ್ಜಿ ಸೇರಿದಂತೆ ಸುಮಾರು 200 ಕೈದಿಗಳ ವಿರುದ್ಧ ಹಿಂಸೆಗಾಗಿ ಪ್ರಕರಣ ದಾಖಲಿಸಲಾಗಿದೆ.

ಘಟನೆ ಜೂನ್ 23ರಂದು ಬೆಳಿಗ್ಗೆ 9 ರ ಸುಮಾರಿಗೆ ನಡೆದಿದೆ. ತನ್ನ ಉತ್ತಮ ನಡತೆಯಿಂದಾಗಿ ತಾನಿರುವ ಬ್ಯಾರಾಕಿನ ವಾರ್ಡನ್ ಆಗಿದ್ದ ಮಂಜುಳಾ ಆ ದಿನ ಬೆಳಗ್ಗಿನ ಉಪಾಹಾರಕ್ಕಾಗಿ ನಿಗದಿ ಪಡಿಸಲಾಗಿದ್ದ ವಸ್ತುಗಳಲ್ಲಿ ಎರಡು ಮೊಟ್ಟೆಗಳು ಮತ್ತು ಐದು ಪೀಸ್ ಪಾವ್ ಇರದೇ ಇದ್ದುದನ್ನು ಗಮನಿಸಿದ್ದು, ಆಕೆಯನ್ನು ಜೈಲಿನ ಅಧಿಕಾರಿ ಮನೀಶಾ ಪೋಖರ್ಕರ್ ಅವರ ಖಾಸಗಿ ಕೊಠಡಿಗೆ ಹೋಗುವಂತೆ ಹೇಳಲಾಗಿತ್ತು.

ಪ್ರತ್ಯಕ್ಷದರ್ಶಿ ಸಾಕ್ಷಿಯ ಪ್ರಕಾರ ಮಂಜುಳಾ ನೋವಿನಿಂದ ಆರಚುವ ಸದ್ದು ಕೇಳಿಸಿತ್ತು. ಸ್ವಲ್ಪ ಹೊತ್ತಿನ ನಂತರ ತನ್ನ ಸೆಲ್ ಗೆ ಹಿಂದಿರುಗಿದ ಮಂಜುಳಾ ನೋವಿನಲ್ಲಿದ್ದಳು. ನಂತರ ಜೈಲರುಗಳ ಒಂದು ತಂಡ ಅಲ್ಲಿಗೆ ಬಂದು ಮಂಜುಳಾ ಮೇಲೆ ಹಲ್ಲೆ ನಡೆಸಿತು. ಪ್ರತ್ಯಕ್ಷದರ್ಶಿ ಪ್ರಕಾರ ಮಹಿಳಾ ಕಾನ್‌ಸ್ಟೇಬಲ್ ಗಳಾದ ಬಿಂದು ನಾಯ್ಕಡೆ, ವಸೀಮಾ ಶೇಕ್, ಶೀತಲ್ ಶೆಗಾಂವ್ಕರ್, ಸುರೇಖಾ ಗುಲ್ವೆ ಹಾಗೂ ಆರತಿ ಶಿಂಗ್ನೆ ಮಂಜುಳಾಳನ್ನು ವಿವಸ್ತ್ರಗೊಳಿಸಿ ಅವರಲ್ಲಿಬ್ಬರು ಆಕೆಯ ಕಾಲುಗಳನ್ನು ದೂರವಿರಿಸಿದಾಗ ವಸೀಮಾ ಲಾಠಿಯಿಂದ ಆಕೆಯ ಖಾಸಗಿ ಭಾಗಕ್ಕೆ ತಿವಿದಿದ್ದಾಗಿ ತಿಳಿಸಿರುತ್ತಾರೆ.

ತೀವ್ರ ರಕ್ತಸ್ರಾವದಿಂದ ಬಳಲಿದ ಮಂಜುಳಾ ಶೌಚಾಲಯದಲ್ಲಿ ಸ್ಮತಿ ತಪ್ಪಿ ಬಿದ್ದಾಗ ಆಕೆಯನ್ನು ಜೈಲಿನ ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿಂದ ಜೆಜೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಮೃತಪಟ್ಟಿದ್ದರು. ಆಕೆಯ ಶ್ವಾಸಕೋಶಕ್ಕೆ ಪೆಟ್ಟಾಗಿತ್ತು ಹಾಗು ಆಕೆಯ ದೇಹದ ಹಲವೆಡೆ ಗಾಯಗಳಾಗಿದ್ದವು ಎಂದು ಪೋಸ್ಟ್ ಮಾರ್ಟಂ ವರದಿ ತಿಳಿಸಿದೆ.

ಐದು ಮಂದಿ ಕಾನ್‌ಸ್ಟೇಬಲ್ ಗಳು ಹಾಗೂ ಜೈಲ್ ಅಧಿಕಾರಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ತನ್ನ ನಾದಿನಿ ವಿದ್ಯಾ ಶೆಟ್ಯೆ ಕೊಲೆ ಪ್ರಕರಣದಲ್ಲಿ ಮಂಜುಳಾ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದು, ಆಕೆಯ ತಾಯಿ ಕೂಡ ಶಿಕ್ಷೆಗೊಳಗಾಗಿದ್ದರೂ ಆಕೆ ಮೃತಪಟ್ಟಿದ್ದಾರೆ. ವಿದ್ಯಾಳನ್ನು ಜನವರಿ 4, 1996ರಲ್ಲಿ ಬೆಂಕಿ ಹಚ್ಚಿ ಸಾಯಿಸಲಾಗಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X