ಉತ್ತರ ಪ್ರದೇಶ: ರೈಲ್ವೆ ನಿಲ್ದಾಣದಿಂದ ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ

ಸಂಭಲ್, ಜೂ. 27: ಬರೇಲಿ ರೈಲ್ವೆ ನಿಲ್ದಾಣದಿಂದ ಮಹಿಳೆಯೊಬ್ಬಳನ್ನು ಅಪಹರಿಸಿದ ಇಬ್ಬರು ವ್ಯಕ್ತಿಗಳು ಆಕೆಯ ಮೇಲೆ ಇಲ್ಲಿನ ಗಿನ್ನೌರ್ ಪ್ರದೇಶದಲ್ಲಿ ನಾಲ್ಕು ದಿನಗಳ ಕಾಲ ಸತತ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ವರದಿಯಾಗಿದೆ.
ನಲ್ವತ್ತು ವರ್ಷದ ಸಂತ್ರಸ್ತೆ ಜೂನ್ 16ರಂದು ಪಾನಿಪತ್ ಗೆ ತೆರಳುತ್ತಿದ್ದಾಗ ಆಕೆಗೆ ಅಮಲು ಬರಿಸುವ ವಸ್ತು ನೀಡಿ ಆಕೆಯನ್ನು ಆಕೆಯ 11 ವರ್ಷದ ಪುತ್ರಿ ಹಾಗೂ 13 ವರ್ಷದ ಪುತ್ರನೊಂದಿಗೆ ಅಪಹರಿಸಲಾಗಿತ್ತು ಎಂದು ಎಎಸ್ಪಿ ಪಂಕಜ್ ಪಾಂಡೆ ಹೇಳಿದ್ದಾರೆ.
ಅಪಹರಣಕಾರರಿಂದ ತನ್ನ ಪುತ್ರನೊಂದಿಗೆ ಸೇರಿ ಹೇಗೋ ತಪ್ಪಿಸಿಕೊಂಡಿರುವ ಮಹಿಳೆ ತನ್ನ ಪುತ್ರಿ ಇನ್ನೂ ಅದೇ ಗ್ರಾಮದಲ್ಲಿದ್ದಾಳೆ ಎಂದಿದ್ದಾಳೆ. ಚಂದೌಸಿ ಠಾಣೆಯಲ್ಲಿ ಇಬ್ಬರು ಮಹಿಳೆಯರೂ ಸೇರಿದಂತೆ ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
Next Story





