Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮನಪಾ ಮಾಹಿತಿ ಕೇಂದ್ರ ವಾರದೊಳಗೆ ಆರಂಭ:...

ಮನಪಾ ಮಾಹಿತಿ ಕೇಂದ್ರ ವಾರದೊಳಗೆ ಆರಂಭ: ಮೇಯರ್

ವಾರ್ತಾಭಾರತಿವಾರ್ತಾಭಾರತಿ27 Jun 2017 3:31 PM IST
share
ಮನಪಾ ಮಾಹಿತಿ ಕೇಂದ್ರ ವಾರದೊಳಗೆ ಆರಂಭ: ಮೇಯರ್

ಮಂಗಳೂರು, ಜೂ.27: ಸಾರ್ವಜನಿಕರಿಗೆ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ದೊರೆಯುವ ಸೌಲಭ್ಯಗಳು ಹಾಗೂ ಇತರ ಸಮಗ್ರ ಮಾಹಿತಿಯನ್ನು ನೀಡುವ ಮಾಹಿತಿ ಕೇಂದ್ರವು ನಗರ ಪಾಲಿಕೆಯಲ್ಲಿ ಒಂದು ವಾರದೊಳಗೆ ಕಾರ್ಯಾರಂಭಿಸಲಿದೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.

ಮಾಸಿಕ ಫೋನ್ ಇನ್ ಕಾರ್ಯಕ್ರಮದ ವೇಳೆ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಕಳೆದ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಬ್ಬರಿಂದ ಈ ಬಗ್ಗೆ ಮನವಿ ಬಂದಿತ್ತು. ಶೀಘ್ರವೇ ಮಾಹಿತಿ ಕೇಂದ್ರ ಆರಂಭಿಸುವ ಭರವಸೆಯನ್ನೂ ನೀಡಲಾಗಿತ್ತು. ಆದರೆ ವಿವಿಧ ಇಲಾಖೆಗಳ ಸಮಗ್ರ ಮಾಹಿತಿಯನ್ನು ಒಳಗೊಂಡ ಕೈಪಿಡಿಯನ್ನೂ ತಯಾರಿಸುವ ಕಾರ್ಯದಿಂದಾಗಿ ಕೊಂಚ ವಿಳಂಬವಾಯಿತು. ಮುಂದಿನ ಪರಿಷತ್ತು ಸಭೆಯಲ್ಲಿ ಈ ಬಗ್ಗೆ ನಿರ್ಣಯ ಮಂಡಿಸಿ ಕೇಂದ್ರ ಕಾರ್ಯಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಮನಪಾ ಕಚೇರಿಯ ತಳ ಅಂತಸ್ತಿನಲ್ಲಿ ಸಿಬ್ಬಂದಿಯೊಂದಿಗೆ ಈ ಕೇಂದ್ರ ಕಾರ್ಯಾಚರಿಸಲಿದೆ. ಈಗಿರುವ ಸಹಾಯವಾಣಿಯ ಜತೆಗೆ ಇದೀಗ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಈ ಮಾಹಿತಿ ಕೇಂದ್ರದ ಮೂಲಕ ಒದಗಿಸಲಾಗುವುದು. ಜತೆಗೆ ಮಾಹಿತಿಯನ್ನು ಒಳಗೊಂಡ ಕೈಪಿಡಿಯು 10 ರೂ. ದರದಲ್ಲಿ ಕೇಂದ್ರದಲ್ಲಿ ಲಭ್ಯವಿರುತ್ತದೆ ಎಂದು ಅವರು ಹೇಳಿದರು.

ಕಳೆದ ಕಾರ್ಯಕ್ರಮದಲ್ಲಿ ವ್ಯಕ್ತವಾದ ಸಮಸ್ಯೆಗಳನ್ನು (ಡಾಮರೀಕರಣ, ಟೆಂಡರ್ ಕರೆದು ಮಾಡುವಂತಹ ಕಾಮಗಾರಿಗಳನ್ನು ಹೊರತುಪಡಿಸಿ) ಉಳಿದೆಲ್ಲವನ್ನೂ ಪಾಲಿಕೆ ಅಧಿಕಾರಿಗಳ ಮೂಲಕ ಗಮನ ಹರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಮೇಯರ್ ಈ ಸಂದರ್ಭ ತಿಳಿಸಿದರು.

ಶೌಚ ನೀರು ತೋಡಿಗೆ!
ಕದ್ರಿ ಕಂಬಳದ ಚಂದ್ರಿಕಾ ಬಡಾವಣೆ ಬಳಿ ಮಹಾನಗರ ಪಾಲಿಕೆಯ ಶೌಚಾಲಯದ ನೀರು ಒಳಚರಂಡಿಗೆ ಸೇರುತ್ತಿದೆ. ಮಳೆಗಾಲದಲ್ಲಿ ಈ ನೀರು ತಮ್ಮ ಮನೆಗೂ ನುಗ್ಗುತ್ತದೆ. ಅಲ್ಲಿನ ಮೋರಿಯ ಕುಸಿದಿದ್ದು, ಗುತ್ತಿಗೆದಾರರಿಗೂ ತಿಳಿಸಲಾಗಿತ್ತು ಎಂದು ಸ್ಥಳೀಯರೊಬ್ಬರು ಫೋನ್ ಮೂಲಕ ದೂರಿದರು.

ಮನಪಾ ಶೌಚಾಲಯಗಳ ಕುರಿತಂತೆ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶೌಚ ನೀರು ಯಾವುದೇ ರೀತಿಯಲ್ಲಿ ಒಳಚರಂಡಿಗಳಿಗೆ ಹೋಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದರು.

ಬಾರೆಬೈಲ್ ಗ್ಲೋಬಲ್ ಕೋರ್ಟ್ ಬಳಿಯಿಂದ ಯೆಯ್ಯೋಡಿಗೆ ಹೋಗುವ ಮುಖ್ಯ ರಸ್ತೆಗೆ ಡಾಮರೀಕರಣ ಮಾಡಲಾಗಿಲ್ಲ. ಅಲ್ಲಿನ ಒಳರಸ್ತೆಗಳಿಗೂ ಕಾಂಕ್ರಿಟೀಕರಣ ಮಾಡಲಾಗಿರುವಾಗ ಪ್ರಮುಖ ರಸ್ತೆಗೆ ಡಾಮರು ಇಲ್ಲ. ಮಾತ್ರವಲ್ಲದೆ ಚರಂಡಿಯಲ್ಲಿ ಮಣ್ಣು ತುಂಬಿ ಮಳೆಗಾಲದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗಿದೆ ಎಂದು ಸ್ಥಳೀಯರಾದ ಮಧುಕರ್ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಕವಿತಾ ಸನಿಲ್, ಮಳೆಗಾಲದ ಕಳೆದ ಕೂಡಲೇ ರಸ್ತೆ ಡಾಮರೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ನೀರು ಹರಿಯುವ ತೋಡಿನ ಮಣ್ಣು ತೆರವುಗೊಳಿಸಲಾಗುವುದು ಎಂದರು.

ಜ್ಯೋತಿಯಿಂದ ಬಂಟ್ಸ್ ಹಾಸ್ಟೆಲ್ ರಸ್ತೆಗೆ ಫುಟ್‌ಪಾತ್ ಇಲ್ಲ!

ಜ್ಯೋತಿಯಿಂದ ಬಂಟ್ಸ್‌ಹಾಸ್ಟೆಲ್‌ವರೆಗಿನ ರಸ್ತೆಯನ್ನು ಕಾಂಕ್ರಿಟೀಕರಣ ಮಾಡಿ ನಾಲ್ಕು ವರ್ಷಗಳಾಗುತ್ತಾ ಬಂತು. ಆದರೆ ಇನ್ನೂ ವಯೋ ವೃದ್ಧರು ನಡೆದಾಡಲು ಸಾಧ್ಯವಾಗುವಂತೆ ಫುಟ್‌ಪಾತ್ ನಿರ್ಮಾಣ ಮಾಡಲಾಗಿಲ್ಲ ಎಂದು ಹಿರಿಯ ನಾಗರಿಕರೊಬ್ಬರು ಬೇಸರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಕವಿತಾ ಸನಿಲ್, ಫುಟ್‌ಪಾತ್ ನಿರ್ಮಾಣಕ್ಕೆ ಸಂಬಂಧಿಸಿ ಟೆಂಡರ್ ಕರೆಯಲಾಗಿದೆ. ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದರು.

ರಸ್ತೆ ಮಾಡಿಕೊಡಿ: 

ಕಂಕನಾಡಿ ರೈಲ್ವೇ ಸ್ಟೇಷನ್ ಬಳಿಯ ಅಳಪೆ ಬಳಿ ರಸ್ತೆಯ ವ್ಯವಸ್ಥೆ ಇಲ್ಲದೆ ಮಕ್ಕಳು ಸೇರಿದಂತೆ ಸಾರ್ವಜನಿಕರು ನಡೆದಾಡಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರೊಬ್ಬರು ಹೇಳಿದಾಗ, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಕಡೇಕಾರು- ತಾರ್ದೊಲ್ಯ ರಸ್ತೆಯಲ್ಲಿ ಹೊಂಡ!

ಜಪ್ಪಿನಮೊಗರಿನ ಕಡೇಕಾರಿನಿಂದ ತಾರ್ದೊಲ್ಯಕ್ಕೆ ಹೋಗುವ ರಸ್ತೆಯು ಹೊಂಡಗಳಿಂದ ತುಂಬಿದೆ. ಈ ರಸ್ತೆಯಲ್ಲಿ ಶಾಲಾ ವಾಹನಗಳು ಅಪಾಯಕಾರಿ ಸ್ಥಿತಿಯಲ್ಲಿ ಸಂಚರಿಸುವಂತಾಗಿದೆ ಎಂದು ಜಪ್ಪಿನಮೊಗರಿನ ರಂಜಿತ್ ದೂರಿಕೊಂಡರು.
ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ಹೊಂಡ ಮುಚ್ಚಲಾಗುವುದು ಎಂದು ಮೇಯರ್ ಹೇಳಿದರು.

ನಿಲ್ಲದ ಬಸ್ ಗಳ ಕರ್ಕಶ ಹಾರ್ನ್‌ !
ಡಾ. ಅಂಬೇಡ್ಕರ್ ವೃತ್ತ ಸಮೀಪದ ಮಹಿಳಾ ಕಾಲೇಜಿನ ಎದುರು ನಿಲ್ಲಿಸುವ ಬಸ್ಸುಗಳು ಕರ್ಕಶವಾಗಿ ಹಾರ್ನ್ ಸದ್ದು ಮಾಡುತ್ತಿವೆ ಎಂದು ಕಾಲೇಜಿನ ಮುಖ್ಯಸ್ಥರೊಬ್ಬರು ದೂರಿದಾಗ, ಈ ಬಗ್ಗೆ ಟ್ರಾಫಿಕ್ ಪೊಲೀಸರ ಗಮನಕ್ಕೆ ತರುವುದಾಗಿ ಮೇಯರ್ ತಿಳಿಸಿದರು.

ಪಿವಿಎಸ್- ಬಂಟ್ಸ್‌ಹಾಸ್ಟೆಲ್‌ವರೆಗೆ ರಸ್ತೆ ಬ್ಲಾಕ್!

ಪಿವಿಎಸ್ ಜಂಕ್ಷನ್‌ನಿಂದ ಬಂಟ್ಸ್‌ಹಾಸ್ಟೆಲ್ ರಸ್ತೆ ಯಾವಾಗಲೂ ಬ್ಲಾಕ್ ಆಗುತ್ತಿರುತ್ತದೆ. ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತದೆ ಎಂದು ಸ್ಥಳೀಯರೊಬ್ಬರ ದೂರಿಗೆ, ಈ ಬಗ್ಗೆ ಟ್ರಾಫಿಕ್ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಮೇಯರ್ ತಿಳಿಸಿದರು.

ಭಿಕ್ಷಾಟನೆ ಸಮಸ್ಯೆ ನಿವಾರಿಸಿ

ಲಾಲ್‌ಬಾಗ್ ಬಲಿ ಸೊಂಟದಲ್ಲಿ ಮಗುವನ್ನು ಹಿಡಿದು ಭಿಕ್ಷೆ ಬೇಡುವುದು, ಗ್ಲಾಸ್ ಕ್ಲೀನ್ ಮಾಡುವ ಸಾಮಗ್ರಿ ಇರುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ನಾಗರಿಕರೊಬ್ಬರು ದೂರಿದರು.
ಈ ಬಗ್ಗೆ ಸಂಬಂಧಪಟ್ಟವರಿಗೆ ಕ್ರಮಕ್ಕೆ ತಿಳಿಸುವುದಾಗಿ ಮೇಯರ್ ಭರವಸೆ ನೀಡಿದರು.

ಗದ್ದೆಯಲ್ಲಿ ನೀರು ತುಂಬಿ ಸೊಳ್ಳೆಗಳ ಕಾಟ!

ಕಂಕನಾಡಿ ಬೈಪಾಸ್ ರಸ್ತೆಯಲ್ಲಿನ ಬಿಎಸ್‌ಎನ್‌ಎಲ್ ಕಟ್ಟಡದ ಬಳಿ ಇರುವ ಕಟ್ಟಡವೊಂದರ ಹಿಂದೆ ಗದ್ದೆಯಲ್ಲಿ ನೀರು ನಿಂತು ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಹಿಂದೆ ಮನಪಾಕ್ಕೆ ದೂರು ನೀಡಿದ್ದಾಗ ಮಣ್ಣು ತುಂಬಿಸಿ ನೀರು ನಿಲ್ಲದಂತೆ ಕ್ರಮ ವಹಿಸುವುದಾಗಿ ಹೇಳಲಾಗಿತ್ತು ಎಂದು ಸ್ಥಳೀಯರಾದ ರಾಬರ್ಟ್ ಎಂಬವರು ದೂರಿದರು.

ಅದು ಖಾಸಗಿ ಜಾಗವಾಗಿರುವುದರಿಂದ ಅವರಿಗೆ ನೋಟೀಸು ನೀಡಿ ಸ್ವಚ್ಛತೆಯನ್ನು ಕಾಪಾಡಲು ಹೇಳಲಾಗುವುದು ಎಂದು ಮೇಯರ್ ಉತ್ತರಿಸಿದರು.

ಮಳೆ ನೀರು ಕೊಯ್ಲು ಮಾಡಲು ಒತ್ತು ಕೊಡಿ

ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಬ್ಬರು ಮಳೆ ನೀರು ಕೊಯ್ಲು ಮಾಡುವುದು ಹಾಗೂ ಹಾಳಾದ ಬೋರ್‌ವೆಲ್‌ಗಳಲ್ಲೂ ಮಳೆ ನೀರು ಮರುಪೂರಣಗೊಳಿಸುವ ಕಾರ್ಯಕ್ಕೆ ನಗರದಲ್ಲಿ ಒತ್ತು ನೀಡುವ ಮೂಲಕ ನೀರಿನ ಸಮಸ್ಯೆ ನಿವಾರಣೆಗೆ ಮುಂದಾಗಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಚಿಂತನೆ ಮಾಡುವುದಾಗಿ ಮೇಯರ್ ತಿಳಿಸಿದರು.

ಒಟ್ಟು 30 ಕರೆಗಳನ್ನು ಇಂದು ಮೇಯರ್ ಸ್ವೀಕರಿಸಿ, ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು. ಈ ಸಂದರ್ಭ ಉಪ ಮೇಯರ್ ರಜನೀಶ್, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್, ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X