ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಸಂಯೋಜಕರಾಗಿ ಸಾಬು ಸಾಹೇಬ್ ಪಾಲ್ತಾಡು ನೇಮಕ

ಪುತ್ತೂರು, ಜೂ.27: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಸಂಯೋಜಕರಾಗಿ ಸಾಬು ಸಾಹೇಬ್ ಪಾಲ್ತಾಡು ನೇಮಕಗೊಂಡಿದ್ದಾರೆ.
ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಅಧ್ಯಕ್ಷ ಸೈಯದ್ ಅಹಮ್ಮದ್ ಅವರ ನಿರ್ದೇಶನದಂತೆ ಎಐಸಿಸಿ ಅಲ್ಪಸಂಖ್ಯಾತ ರಾಷ್ಟ್ರೀಯ ಅಧ್ಯಕ್ಷ ಖುರ್ಷಿದ್ ಅಹಮ್ಮದ್ ಸೈಯದ್ ನೇಮಕಗೊಳಿಸಿ ಆದೇಶಿಸಿದ್ದಾರೆ.
ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪಾಲ್ತಾಡು ನಿವಾಸಿಯಾಗಿರುವ ಸಾಬು ಸಾಹೇಬ್ ಅವರು ರಾಜ್ಯ ಕೆಪಿಸಿಸಿ ಸೇವಾದಳದ ಸದಸ್ಯರಾಗಿದ್ದು, ದ.ಕ ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಮಾಜಿ ಉಪಾಧ್ಯಕ್ಷರಾಗಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷರಾಗಿ, ಪೆರುವಾಜೆ ಗ್ರಾ.ಪಂ ಮಾಜಿ ಸದಸ್ಯರಾಗಿ, ಚೆನ್ನಾವರ ಜುಮಾ ಮಸೀದಿಯ ಅಧ್ಯಕ್ಷಾಗಿ ಸೇವೆ ಸಲ್ಲಿಸಿದ್ದು ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ, ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
Next Story