ಕಾಸರಗೋಡು; ತೀವ್ರಗೊಂಡ ಕಡಲ್ಕೊರೆತ
.jpg)
ಕಾಸರಗೋಡು: ಮಳೆ ಬಿರುಸು ಗೊಳ್ಳುತ್ತಿದಂತೆ ಕಡಲ್ಕೊರೆತ ತೀವ್ರಗೊಂಡಿದ್ದು, ಉಪ್ಪಳ ಮುಸೋಡಿ ಅದಿಕೆಯಲ್ಲಿ ಕಡಲ್ಕೊರೆತದಿಂದ ಹತ್ತಕ್ಕೂ ಅಧಿಕ ಮನೆಗಳು ಅಪಾಯದಲ್ಲಿದೆ. ಎರಡು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. 28 ತೆಂಗುಗಳು ಸಮುದ್ರ ಪಾಲಾಗಿವೆ. ಒಂದು ವಿದ್ಯುತ್ ಕಂಬ ನೆಲಕಚ್ಚಿದೆ.
ಮುಸೋಡಿ ತೀರದ ಅಶ್ರಫ್, ಹಸನಬ್ಬ ರವರ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಾಳಾಂತರಿಸಲಾಗಿದೆ.
ನಫೀಸಾ , ಅಬ್ದುಲ್ ಖಾದರ್, ಅಬ್ದುಲ್ ಹಮೀದ್ , ಮೊಯಿದಿನ್ ಕುಂಞ ಮೊದಲಾದವರ ಮನೆಗಳು ಅಪಾಯದದಲ್ಲಿದೆ. ಈ ಕುಟುಂಬವನ್ನು ಸ್ಥಳಾಂ ರಿಸಬೇಕಾಗಿ ಬರಬಹುದು ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ಕಂದಾಯ ಅಧಿಕಾರಿಗಳು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು , ತೀರವಾಸಿಗಳು ಆತಂಕದಲ್ಲೇ ದಿನ ದೂಡುವಂತಾಗಿದೆ
Next Story





