ಜು.1: ಕೆರೆಗೆ ನೀರು ತುಂಬಿಸಲು ಆಗ್ರಹಿಸಿ ಹಿರಿಯ ನಾಗರಿಕರಿಂದ ಪ್ರತಿಭಟನೆ
.jpg)
ಹಾಸನ, ಜೂ.27: ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ಜುಲೈ 1 ರಂದು ನಗರದ ಹೊಸ ಬಸ್‌ನಿಲ್ದಾಣ ಚನ್ನಪಟ್ಟಣ ರಸ್ತೆ ಮಧ್ಯೆ ಹಿರಿಯ ನಾಗರೀಕರು ಸೇರಿ ಪ್ರತಿಭಟನೆ ಮಾಡುವ ಬಗ್ಗೆ ಸಭೆಯಲ್ಲಿ ಒಮ್ಮತದ ತೀರ್ಮಾನ ಮಾಡಲಾಯಿತು.
ನಗರದ ಎಂ.ಜಿ. ರಸ್ತೆ ಬಳಿ ಇರುವ ಸರ್.ಎಂ. ವಿಶ್ವೇಶ್ವರಯ್ಯ ಭವನದಲ್ಲಿ ಮೊದಲೇ ತೀರ್ಮಾನಿಸಿದಂತೆ ಮಂಗಳವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಹಿರಿಯ ನಾಗರೀಕರ ಸಭೆಯಲ್ಲಿ ಕೆರೆ ಕಟ್ಟೆಗಳನ್ನು ಉಳಿಸಲು ನೀರು ತುಂಬಿಸುವ ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸಲು ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದರಿಂದ ಜುಲೈ 1ರ ಶನಿವಾರ ಬೆಳಿಗ್ಗೆ ಚನ್ನಪಟ್ಟಣ ರಸ್ತೆ ಮಧ್ಯೆ ಬೃಹತ್ ಪ್ರತಿಭಟನೆ ಮಾಡುವುದಾಗಿ ತೀರ್ಮಾನಿಸಲಾಯಿತು.
ಸಮಾಜ ಸೇವಕರು ಹಾಗೂ ವೈದ್ಯರು ಗುರುರಾಜು ಹೆಬ್ಬಾರ್ ಮಾತನಾಡಿ, ತಾತ್ಕಲಿಕ ಕುಡಿಯುವ ನೀರಿನ ಪರಿಹಾರ ಕಂಡುಕೊಳ್ಳುವ ಬದಲು ಶಾಶ್ವತ ಕುಡಿಯುವ ನೀರಿನ ಬಗ್ಗೆ ಗಮನಸೆಳೆಯುವ ಕೆಲಸ ಮಾಡಬೇಕಾಗಿದೆ. ಹಿಂದಿನಗಿಂತ ಇಂದು ಜನಸಂಖ್ಯೆ ಹೆಚ್ಚಾಗಿದೆ. ಆಗೇ ನೀರಿನ ಬೇಡಿಕೆಯು ಹೆಚ್ಚಾಗುತ್ತಿದೆ ಎಂದರು. ಸಮುದ್ರದ ನೀರನ್ನು ವೈಜ್ಞಾನಿಕವಾಗಿ ಉಪಾಯೋಗಿಸಿಕೊಳ್ಳಲುಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ನಾಗರಿಕರ ವೇದಿಕೆಯ ಮುಖಂಡರು ಬಿ.ಕೆ. ಮಂಜುನಾಥ್ ಮಾತನಾಡಿ, ಕಳೆದ ಮೂರ್ನಾಲ್ಕು ತಿಂಗಳಿನಿಂದ ನಮ್ಮ ವೇದಿಕೆಯು ಕೆರೆಗಳಿಗೆ ನೀರು ತುಂಬಿಸಲು ಒತ್ತಾಯಿಸಿ ಹೋರಾಟದ ಮೂಲಕ ಸರಕಾರದ ಮಟ್ಟದವರೆಗೂ ಗಮನಸೆಳೆಯುವ ಕೆಲಸ ಮಾಡಿಕೊಂಡು ಬರುತ್ತಿದೆ. ನಗರ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲು ಜನಪ್ರತಿನಿಧಿಗಳಿಗೂ ಹಾಗೂ ಸಂಬಂಧಪಟ್ಟವರಿಗೂ ಮನವಿ ಮಾಡಲಾಗಿದ್ದರೂ ಇದುವರೆಗೂ ಯಾವ ಪ್ರಯೋಜನವಾಗಿರುವುದಿಲ್ಲ. ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಹಿರಿಯರೆಲ್ಲಾ ಸೇರಿ ಬೀದಿಗಿಳಿದು ಹೋರಾಟ ಮಾಡಲು ಮುಂದಾಗಿದ್ದೇವೆ. ಇದಕ್ಕೆ ವಿವಿಧ ಸಂಘಟನೆ ಹಾಗೂ ಸಂಘ ಸಂಸ್ಥೆಗಳು ಸೇರಿದಂತೆ ಇತರರು ಸೇರಿ ಜೂನ್ 1 ರಂದು ಬೀದಿಗಿಳಿದು ಹೋರಾಟ ಮಾಡುವುದಾಗಿ ಹೇಳಿದರು. ಕೊಳವೆ ಬಾವಿಗಳೂ ಮತ್ತು ಬಾವಿಗಳಲ್ಲಿ ನೀರು ಮತ್ತೆ ಬರಬೇಕಾದರೇ ಇರುವ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿನಾಕಲಗೂಡು ಮಾತನಾಡಿ, ಕಳೆದ ಮುರು ವರ್ಷಗಳಿಂದ ಜಿಲ್ಲೆಯಲ್ಲಿ ಬರಗಾರ ಆವರಿಸಿದೆ. ನಗರದಲ್ಲಿ ಕುಡಿಯುವ ನೀರಿಗೆ ಅಹಕಾರ ಉಂಟಾಗಿದ್ದು, ಕೃಷಿಕರಂತು ಪರದಾಡುತ್ತಿದ್ದಾರೆ. ನಗರದ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿಲ್ಲ. ಮತ್ತೆ ಪುನಶ್ಚೇತನಗೊಳಿಸಲು ಇರುವ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಮಾಡುವಂತೆ ಒತ್ತಾಯಿಸಲು ಮುಂದಾಗಿರುವುದು ಸ್ವಾಗತರ್ಹ ಎಂದರು. ಇಂತಹ ಹೋರಾಟಕ್ಕೆ ಹಿರಿಯ ನಾಗರೀಕರ ಜೊತೆ ಎಲ್ಲಾ ಕೈಜೋಡಿಸಲು ಕರೆ ನೀಡಿದರು.







