ಅಮೆರಿಕ ಪೊಲೀಸರ “ಮಾನವೀಯತೆ”ಯ ಬೆಂಗಾವಲು..!
ಇದು ಡೊನಾಲ್ಡ್ ಟ್ರಂಪ್ ಗೂ ಅಲ್ಲ, ಯಾವ ಮಂತ್ರಿಗೂ ಅಲ್ಲ

ಯುಎಸ್ ಎ, ಜೂ.27: ಸಾಮಾನ್ಯವಾಗಿ ಪ್ರಧಾನ ಮಂತ್ರಿ, ರಾಷ್ಟ್ರಪತಿ , ಮುಖ್ಯಮಂತ್ರಿಗಳ ಆಗಮನದ ಸಂದರ್ಭ ಪೊಲೀಸ್ ಬೆಂಗಾವಲುಪಡೆಗಳು ಆಗಮಿಸುವುದನ್ನು ನಾವು ನೋಡಿರುತ್ತೇವೆ. ಆದರೆ ಅಮೆರಿಕದ ಕೊಲೊರಾಡೋದ ಗ್ರೀನ್ ವುಡ್ ನ ಪೊಲೀಸರು ಬಾತುಕೋಳಿ ಕುಟುಂಬವೊಂದಕ್ಕೆ ಬೆಂಗಾವಲು ಒದಗಿಸಿ ಮಾನವೀಯತೆ ಮೆರೆದಿದ್ದಾರೆ.
ಇಲ್ಲಿನ ಹೆದ್ದಾರಿಯಲ್ಲಿ ಬಾತುಕೋಳಿಯೊಂದು ಮರಿಗಳೊಂದಿಗೆ ರಸ್ತೆಬದಿಯಲ್ಲಿ ಸಾಗುತ್ತಿದ್ದು, ವಾಹನನಿಬಿಡ ಪ್ರದೇಶವಾದ ಇಲ್ಲಿ ಬಾತುಕೋಳಿಗಳು ಅಪಾಯಕ್ಕೆ ಸಿಲುಕದಂತೆ ಪೊಲೀಸ್ ವಾಹನಗಳು ಬೆಂಗಾವಲಾಗಿ ಸಂಚರಿಸಿದೆ. ಈ ಘಟನೆಯ ದೃಶ್ಯವನ್ನು ಸ್ಥಳೀಯರೊಬ್ಬರು ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Next Story





