ಯುವಕನ ಥಳಿಸಿ ಹತ್ಯೆ: ಆರೋಪಿಗಳ ಪತ್ತೆಗೆ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ

ಚಂಡಿಗಢ, ಜೂ. 26: ಮಥುರಾಕ್ಕೆ ತೆರಳುತ್ತಿರುವ ರೈಲಿನಲ್ಲಿ ಮುಸ್ಲಿಂ ಯುವಕನನ್ನು ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಸುಳಿವು ಪತ್ತೆ ಹಚ್ಚಲು ಘಟನೆ ನಡೆದ ಸ್ಥಳದ ಸುತ್ತಮುತ್ತ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಜುನೈದ್‌ಗೆ ಇರಿದ ಆರೋಪಿ ಬಂಧನಕ್ಕೆ ನೆರವಾಗಲು ವಿವಿಧ ಸ್ಥಳಗಳಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ಫರೀದಾಬಾದ್ ಜಿಆರ್‌ಪಿ ಜಿಎಸ್‌ಜಿ ಮೊಹಿಂದರ್ ಸಿಂಗ್ ತಿಳಿಸಿದ್ದಾರೆ.
Next Story





