ರೈತನ ದೂರು ನಿರ್ಲಕ್ಷಿಸಿದ ಇನ್ಸ್‌ಪೆಕ್ಟರ್‌ಗೆ 25 ಸಾವಿರ ರೂ. ದಂಡ
ಬೆಂಗಳೂರು, ಜೂ.27: ಬಡ ರೈತ ಕಷ್ಟಪಟ್ಟು ಬೆಳೆದಿದ್ದ ಬೆಳೆಯನ್ನು ಇನ್ನೊಬ್ಬ ಗೂಂಡಾಗಿರಿ ಮಾಡಿ ಕಟಾವು ಮಾಡಿಕೊಂಡು ಹೋದ ಘಟನೆ ಬಗ್ಗೆ ಠಾಣೆಗೆ ಬಂದ ದೂರನ್ನು ಐದು ತಿಂಗಳಾದರೂ ದಾಖಲಿಸಿಕೊಳ್ಳದ ಕಲುಬರಗಿ ಪೊಲೀಸರ ಕ್ರಮಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ.
ಅಮಾಯಕ ರೈತನಿಗೆ ಮಾನಸಿಕ ನೋವಿಗೆ ಕಾರಣವಾಗಿರುವ ಜೇವರ್ಗಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರದೀಪ್ ಎಸ್.ಭಿಸೆಗೆ 25 ಸಾವಿರ ರೂ. ದಂಡ ವಿಧಿಸಿದೆ. ಅವರ ವಿರುದ್ಧ ಇಲಾಖಾ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಸರಕಾರಕ್ಕೆ ಆದೇಶಿಸಿದೆ. ದಂಡದ ಹಣವನ್ನು ಪೊಲೀಸ್ ಇನ್ಸ್‌ಪೆಕ್ಟರ್ ತನ್ನ ಸ್ವಂತ ಜೇಬಿನಿಂದ ಕೊಡಬೇಕೇ ಹೊರತು ಸರಕಾರದ ಬೊಕ್ಕಸದಿಂದಲ್ಲ ಎಂದೂ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.
Next Story





