ಪೇಜಾವರ ಶ್ರೀಗೆ ಚಕ್ರವರ್ತಿ ಸೂಲಿಬೆಲೆ ಬೆಂಬಲ
ಉಡುಪಿ, ಜೂ.27: ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ವಿವಾದ ಹಿನ್ನಲೆಯಲ್ಲಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಇಂದು ಮಠದಲ್ಲಿ ಭೇಟಿ ಮಾಡಿದ ಯುವ ಬ್ರಿಗೆಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ಪೇಜಾವರ ಶ್ರೀಗಳಿಗೆ ತನ್ನ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಕಲ್ಪನೆಯಲ್ಲಿದ್ದಾರೆ. ಮುಸಲ್ಮಾನರು ಕೂಡ ಈ ಕಲ್ಪನೆಯನ್ನು ಸ್ವೀಕರಿಸಿ ಮುಂದೆ ಬರಬೇಕು ಎಂದ ಅವರು, ನಾವು ಹುಟ್ಟುವುದಕ್ಕೂ ಮುಂಚೆಯೇ ಸ್ವಾಮೀಜಿ ಹಿಂದೂ ಸಮಾಜದ ಏಳಿಗೆಗೋಸ್ಕರ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಈ ಹಿಂದೆಯೂ ಮಠದಲ್ಲಿ ಸೌಹಾರ್ದದ ಕೆಲಸ ನಡೆದಿತ್ತು ಎಂದರು.
Next Story





