ಲಂಚ ಪ್ರಕರಣ: ಪೊಲೀಸ್ ಪೇದೆಗೆ 2 ವರ್ಷ ಸಜೆ
ಮಂಗಳೂರು, ಜೂ. 27: ಕೇಸ್ ವಜಾ ಮಾಡುವುದಾಗಿ ಹೇಳಿ ವ್ಯಕ್ತಿಯೋರ್ವರಿಂದ ಲಂಚ ಪಡೆದ ಅಪರಾಧದಲ್ಲಿ ನ್ಯಾಯಾಲಯವು ಪೊಲೀಸ್ ಪೇದೆ ಮಹೇಶ್ ಎಂಬಾತನಿಗೆ ಎರಡು ವರ್ಷ ಕಠಿಣ ಶಿಕ್ಷೆ ಹಾಗೂ 10,000 ರೂ. ವಿಧಿಸಿ ತೀರ್ಪು ನೀಡಿದೆ.
2009ರಲ್ಲಿ ಬೆಳ್ತಂಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಮಹೇಶ್ ಎಂಬ ಪೊಲೀಸ್ ಪೇದೆ ಕೇಸ್ ವಜಾ ಮಾಡುವುದಾಗಿ ಹೇಳಿ ಉಮರ್ ಫಾರೂಕ್ ಎಂಬವರಿಂದ 10 ಸಾವಿರ ರೂ. ಲಂಚ ಪಡೆದಿದ್ದ. ಈ ಸಂದರ್ಭದಲ್ಲಿ ಮಹೇಶ್ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದ. ಪ್ರಕರಣದ ಒಂದನೇ ಆರೋಪಿ ಎಸ್‌ಐ ರಾಮೇಗೌಡರ ವಿರುದ್ಧ ಪ್ರಕರಣವನ್ನು ಖುಲಾಸೆಗೊಳಿಸಿದೆ.
ಮೂರನೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮತ್ತು ವಿಶೇಷ ಲೋಕಾಯುಕ್ತ ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ ಪೈ ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಲೋಕಾಯುಕ್ತ ಪರವಾಗಿ ವಿಶೇಷ ಅಭಿಯೋಜಕ ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ವಾದಿಸಿದ್ದರು.
Next Story





