ಅತ್ಯಾಚಾರ ಪ್ರಕರಣದಲ್ಲಿ ಬಂಧಿತ ಮಾಜಿ ಸಚಿವ ಪ್ರಜಾಪತಿ ನಿರಪರಾಧಿ: ಮುಲಾಯಂ ಸಿಂಗ್

ಲಕ್ನೊ,ಜೂ. 28: ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಗಾಯತ್ರಿ ಪ್ರಸಾದ್ ಪ್ರಜಾಪತಿ ನಿರಪರಾಧಿ ಎಂದುಸಮಾಜವಾದಿ ಮುಖ್ಯಸ್ಥ ಮುಲಾಯಂ ಸಿಂಗ್ ಹೇಳಿದ್ದಾರೆ.ಪ್ರಜಾಪತಿಯನ್ನು ಜೈಲಿನಲ್ಲಿ ಭೇಟಿಯಾದ ಬಳಿಕತನ್ನ ನಿಕಟವರ್ತಿಗಾಗಿ ಧ್ವನಿ ಯೆತ್ತಿದ್ದಾರೆ.
" ಪ್ರಜಾಪತಿ ನಿರಪರಾಧಿಯಾಗಿದ್ದಾರೆ. ಪೊಲೀಸರ ಕೈಯಲ್ಲಿ ಯಾವ ಪುರಾವೆಯೂ ಇಲ್ಲ. ಅವರು ಸಂಚಿಗೆ ಬಲಿಯಾದರು. ಭಯೋತ್ಪಾದಕನಂತೆ ಅಧಿಕಾರಿಗಳು ಅವರೊಡನೆ ವರ್ತಿಸುತ್ತಿದ್ದಾರೆ" ಎಂದು ಮುಲಾಯಂಸಿಂಗ್ ಯಾದವ್ ಹೇಳಿದರು. ಈ ಕುರಿತು ಪ್ರಧಾನಿಯನ್ನು ಸಂದರ್ಶಿಸುವೆ. ಅಗತ್ಯವೆಂದಾದರೆ ರಾಷ್ಟ್ರಪತಿಯನ್ನು ಕೂಡಾ ಭೇಟಿಮಾಡುವೆ ಎಂದು ಮುಲಾಯಂಸಿಂಗ್ ಹೇಳಿದ್ದಾರೆ.
Next Story





