ಉದ್ಯಾವರ: ಈದ್ ಸ್ನೇಹ ಕೂಟ

ಉಡುಪಿ, ಜೂ.28: ಉದ್ಯಾವರ ಗ್ರಾಪಂ ಚುನಾಯತ್ ಸದಸ್ಯರು, ಕಾರ್ಯಕಾರಿ ಸಮಿತಿ ಹಾಗೂ ಸಿಬ್ಬಂದಿ ವರ್ಗದವರೊಂದಿಗೆ ಈದ್ ಸ್ನೇಹಕೂಟವು ಮಂಗಳವಾರ ಉದ್ಯಾವರದ ಸಂಪಿಗೆ ನಗರದಲ್ಲಿರುವ ಖದೀಮೀ ಜಾಮಿಯಾ ಮಸೀದಿಯಲ್ಲಿ ನಡೆಯಿತು.
ಕರ್ನಾಟಕ ರಾಜ್ಯ ಜಮಾಅತೆ ಇಸ್ಲಾಮಿ ಹಿಂದ್ ಸಲಹಾ ಸಮಿತಿ ಸದಸ್ಯ ಅಕ್ಬರ್ ಅಲಿ ಈದ್ ಸಂದೇಶ ನೀಡಿದರು. ಮುಖ್ಯ ಅತಿಥಿಗಳಾಗಿ ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಸಂಪಿಗೆನಗರ ಆರೋರುತೋಟದ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರದೀಪ್ ಸುವರ್ಣ, ಮಸೀದಿ ಅಧ್ಯಕ್ಷ ರಹ್ಮತುಲ್ಲಾಹ್ ಉಪಸ್ಥಿತರಿದ್ದರು. ಅಬ್ದುಲ್ ಅಝೀಝ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.
Next Story





