ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಆಯ್ಕೆ

ಉಡುಪಿ, ಜೂ.28: ಯುರೋಪಿನ ಕ್ರೊಏಶಿಯಾದಲ್ಲಿ ‘ಪುರಾತನ ರಸಾಯನ ಚಿಕಿತ್ಸೆಯ ಜ್ಞಾನ’ದ ಕುರಿತು ಜೂ.30ರಿಂದ ಜು.4ರವರೆಗೆ ನಡೆಯಲಿರುವ ಆಯುರ್ವೇದ ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಎಸ್‌ಡಿಎಂ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಯ ಕಾಯಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಜಿ.ಶ್ರೀನಿವಾಸ್ ಆಚಾರ್ಯ ಹಾಗೂ ಎಸ್‌ಡಿಎಂ ಪಾರ್ಮಸಿಯ ಎಜಿಎಂ ಡಾ.ಮುರಳೀದರ ಆರ್. ಭಾಗವಹಿಸಲಿದ್ದಾರೆ.
ಇವರು ಸಮ್ಮೇಳನದಲ್ಲಿ ಅನೇಕ ರೀತಿಯ ರಸಾಯನ ವಿಧಿಗಳು, ವಿಧಾನ ಗಳು, ಪ್ರಮೇಹ ಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ ಮುಂತಾದ ವಿಷಯಗಳ ಕುರಿತು ನಡೆಯುವ ಸರಣಿ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ವಿದೇಶಿ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಿರುವರು ಎಂದು ಪ್ರಕಟಣೆ ತಿಳಿಸಿದೆ.
Next Story