ಮೂಡುಬಿದಿರೆ; ಯುವಕ ಆತ್ಮಹತ್ಯೆ
ಮೂಡುಬಿದಿರೆ, ಜೂ.28: ಅವಿವಾಹಿತ ಯುವಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪ್ರಾಂತ್ಯ ಗ್ರಾಮದ ವಿಶಾಲ್ ನಗರ ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ಸ್ಥಳೀಯ ರಾಮಚಂದ್ರ ಎಂಬವರ ಮಗ ದಿನೇಶ್(25)ಎಂದು ತಿಳಿದುಬಂದಿದೆ.
ಭಾನುವಾರ ಬೆಳಿಗ್ಗೆ ಮನೆಯಿಂದ ಹೊರ ಹೋದವರ ಮರಳಿ ಮನೆಗೆ ಬಂದಿಲ್ಲ. ಈ ಬಗ್ಗೆ ಮನೆಯವರು ಹಾಗೂ ಸ್ಥಳಿಯರು ಹುಡುಕಾಡಿದಾಗ ಬುಧವಾರ ವಿಶಾಲ್ ನಗರ ಎಂಬಲ್ಲಿ ಗೊಬ್ಬರದ ಮರವೊಂದಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ದಿನೇಶ್‌ನ ಶವ ಪತ್ತೆಯಾಗಿದೆ. ಕೂಲಿ ಕೆಲಸ ಮಾಡುತ್ತಿದ್ದ ಈತ ಕುಡಿತದ ಚಟ ಹೊಂದಿದ್ದು ಸರಿಯಾಗಿ ಮನೆಗು ಬರುತ್ತಿರಲಿಲ್ಲ ಎನ್ನಲಾಗಿದೆ. ಮೃತನ ತಾಯಿ ಶ್ಯಾಮಲ ನೀಡಿದ ದೂರಿನಂತೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Next Story





