ಖಾಝಿ ಕುಟುಂಬ ಸಮಾಜಕ್ಕೆ ಮಾದರಿ: ವಿನಯ ಕುಮಾರ್ ಸೊರಕೆ
ಕುಟುಂಬದಿಂದ ನಿರ್ಮಾಣವಾದ ಬಸ್ ತಂಗುದಾಣ ಉದ್ಘಾಟನೆ

ಕಾಪು, ಜೂ. 28: ಖಾಝಿ ಕುಟುಂಬಸ್ಥರು ಸ್ವ ಇಚ್ಛೆಯಿಂದ ಸಾರ್ವಜನಿಕ ಬಸ್ ತಂಗುದಾಣವನ್ನು ನಿರ್ಮಿಸಿ ಕೊಡುವ ಮೂಲಕ ಸಮಾಜಕ್ಕೆ ಕೊಡುಗೆಯಾಗಿ ನೀಡಿ, ಮಾದರಿ ವ್ಯಕ್ತಿಗಳಾಗಿದ್ದಾರೆ ಎಂದು ಕಾಪು ಶಾಸಕ ವಿನಯ ಕುಮಾರ್ ಸೊರಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಪು ಪುರಸಭಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಕೊಪ್ಪಲಂಗಡಿ ಮಲ್ಲಾರು ಸಂಪರ್ಕ ರಸ್ತೆಯ ಪಕ್ಕದಲ್ಲಿ ದಿ. ಹಾಜಿ ಖಾಝಿ ಮುಹಮ್ಮದ್ ಹಸನ್ ಸಾಹೇಬರ ಸ್ಮರಣಾರ್ಥವಾಗಿ ಖಾಝಿ ಕುಟುಂಬಸ್ಥರು ನಿರ್ಮಿಸಿದ ಸಾರ್ವಜನಿಕ ಬಸ್ ತಂಗುದಾಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಭಿ ಅಹ್ಮದ್ ಖಾಝಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ. ಪ್ರಭಾಕರ್ ಶೆಟ್ಟಿ, ಪಡುಬಿದ್ರೆ ಠಾಣಾಧಿಕಾರಿ ಜಗದೀಶ್ ರೆಡ್ಡಿ, ಪುರಸಭಾ ಸದಸ್ಯರಾದ ವಿಜಯಲಕ್ಷ್ಮೀ , ಶಾಬು ಸಾಹೇಬ್, ಮಾಜಿ ಗ್ರಾ.ಪಂ. ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ, ಮುಹಮ್ಮದ್ ಸಾದಿಕ್, ಸುಲೈಮಾನ್ ಇಂಜಿನಿಯರ್, ಹಸನ್ ಖಾಝಿ ಹಾಗೂ ಖಾಝಿ ಸಹೋದರರಾದ ಹಿದಾಯತುಲ್ಲಾ ಖಾಝಿ, ಸಿರಾಜುದ್ದೀನ್ ಖಾಝಿ, ಫೈಝಲ್ ಖಾಝಿ, ಝುಲ್ಫಿಕಾರ್ ಖಾಝಿ, ಫರ್ವೇಝ್ ಖಾಝಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
ಅನ್ವರ್ ಅಲಿ ಕಾಪು ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.







