‘ಇಂಡಿಯಾ ಆನಾ’ ಎಂದು ಮೋದಿ ಆಹ್ವಾನಿಸಿದರು!
ಮೈಕ್ ಪೆನ್ಸ್ ಒಪ್ಪಿದರು

ವಾಶಿಂಗ್ಟನ್, ಜೂ. 28: ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿರುವ ಹಿನ್ನೆಲೆಯಲ್ಲಿ, ಭಾರತಕ್ಕೆ ಭೇಟಿ ನೀಡಲು ತಾನು ಉದ್ದೇಶಿಸಿದ್ದೇನೆ ಎಂದು ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಹೇಳಿದ್ದಾರೆ.
‘‘ಭಾರತಕ್ಕೆ ಭೇಟಿ ನೀಡುವ ಇಂಡಿಯಾನ ರಾಜ್ಯದ ಮೊದಲ ಗವರ್ನರ್ ನಾನಾಗಬೇಕೆಂಬ ನನ್ನ ಮಹತ್ವಾಕಾಂಕ್ಷೆಯ ಬಗ್ಗೆ ಅವರಿಗೆ ನಾನು ಹೇಳಿದ್ದೇನೆ’’ ಎಂದು ಮಂಗಳವಾರ ನಡೆದ ಭಾರತ-ಅಮೆರಿಕ ವ್ಯಾಪಾರ ಮಂಡಳಿಯ 42ನೆ ವಾರ್ಷಿಕ ನಾಯಕತ್ವ ಶೃಂಗಸಮ್ಮೇಳನದಲ್ಲಿ ಮಾತನಾಡಿದ ಪೆನ್ಸ್ ಹೇಳಿದರು.
‘‘ಆಗ ನನಗೆ ಅದನ್ನು ಈಡೇರಿಸಲು ಆಗಲಿಲ್ಲ, ಆದರೆ, ಈಗ ಪ್ರಧಾನಿ ಮತ್ತು ನಾನು ಉತ್ತಮ ಸಂಭಾಷಣೆಯೊಂದರಲ್ಲಿ ತೊಡಗಿದೆವು. ‘ಇಂಡಿಯಾ ಆನಾ’ ಎಂಬ ಪದದ ಹಿಂದಿ ಅರ್ಥ ‘ಭಾರತಕ್ಕೆ ಬನ್ನಿ’ ಎಂದಾಗುತ್ತದೆ ಎಂದು ಅವರು ಹೇಳಿದರು’’ ಎಂದರು.
Next Story





