ಅಕ್ರಮ ಹಣ ಪತ್ತೆ ಪ್ರಕರಣ: ಕೆ.ಸಿ.ರವೀಂದ್ರ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು, ಜೂ.28: ಬಚ್ಚಲು ಮನೆಯಲ್ಲಿ ಬಚ್ಚಿಟ್ಟಿದ್ದ ಹಣ ಪತ್ತೆ ಪ್ರಕರಣ ರದ್ದು ಕೋರಿ ಆರೋಪಿ ರಾಜಕೀಯ ಮುಖಂಡ ಕೆ.ಸಿ.ರವೀಂದ್ರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಸಂಬಂಧ ಕೆ.ಸಿ.ರವೀಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನೆಸಿದ ನ್ಯಾಯಪೀಠ ಈ ಆದೇಶ ನೀಡಿತು.
ಸಿಬಿಐ ಪರ ವಾದಿಸಿದ ವಕೀಲ ಪ್ರಸನ್ನಕುಮಾರ್ ಅವರು, ನೋಟು ಬ್ಯಾನ್ ಆದ 20 ದಿವಸಗಳಲ್ಲಿ 2 ಸಾವಿರ ರೂ.ಮುಖ ಬೆಲೆಯ ಎರಡು ಕಟ್ಟು ಹೊಸ ನೋಟುಗಳು ಪತ್ತೆಯಾಗಿದೆ. ಅಲ್ಲದೆ, ಇಷ್ಟು ಹಣ ಪಡೆಯಲು 18 ಸಾವಿರ ಬಾರಿ ಬ್ಯಾಂಕಿಗೆ ಅಲೆಯಬೇಕಾಗಿತ್ತು. ಆದರೆ, ಕೆ.ಸಿ.ರವೀಂದ್ರ ಅವರು ಬ್ಯಾಂಕಿಗೆ ಅಲೆಯದೆ ಹೊಸ ನೋಟುಗಳನ್ನು ಸಂಗ್ರಹಿಸಿಟ್ಟಿದ್ದರು. ಹಾಗೂ ಬಚ್ಚಲು ುನೆಯಲ್ಲಿ 5.7 ಕೋಟಿ ರೂ.ಬಚ್ಚಿಟ್ಟದ್ದರು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಸಿಬಿಐ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿತು.
Next Story





