ಜಾರಿ ಬಿದ್ದು ಗಾಯಗೊಂಡ ಪೇಜಾವರ ಶ್ರೀ

ಉಡುಪಿ, ಜೂ. 28: ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಬುಧವಾರ ಗರ್ಭಗುಡಿಯಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ಭುಜಕ್ಕೆ ಸಣ್ಣ ಗಾಯವಾಗಿರುವ ಬಗ್ಗೆ ವರದಿಯಾಗಿದೆ.
ಬೆಳಗ್ಗೆ ಪೂಜೆ ನೆರವೇರಿಸಲು ಪೇಜಾವರ ಶ್ರೀ ಹೋಗುವಾಗ ದಾರಿಯಲ್ಲಿ ಬಿದ್ದ ಎಣ್ಣೆ ಜಿಡ್ಡಿನಿಂದ ಆಯತಪ್ಪಿ ಬಿದ್ದರೆನ್ನಲಾಗಿದೆ. ಇದರಿಂದ ಅವರ ಭುಜಕ್ಕೆ ಸಣ್ಣ ಗಾಯವಾಗಿದ್ದು, ವೈದ್ಯರು ಆಗಮಿಸಿ ಚಿಕಿತ್ಸೆ ನೀಡಿ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದಾರೆ.
ಅಭಿನಂದನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬನಾರಿ ವೆಂಕಟೇಶ ಮೂರ್ತಿ ಇಂದು ಪರ್ಯಾಯ ಪೇಜಾವರ ಸ್ವಾಮೀಜಿಗೆ ದೂರವಾಣಿ ಕರೆ ಮಾಡಿ ಮಠದಲ್ಲಿ ಇಫ್ತಾರ್ ಕೂಟ ನಡೆಸಿರುವುದಕ್ಕೆ ಮುಖ್ಯಮಂತ್ರಿಯವರು ಮೆಚ್ಚುಗೆ ಸೂಚಿಸಿ, ಬೆಂಬಲ ವ್ಯಕ್ತಪಡಿಸಿರುವು ದಾಗಿ ಹೇಳಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.
Next Story





