ಅಜೆಕಾರು, ಜೂ.28: ಪಡುಕುಡೂರು ಗ್ರಾಮದ ಮೇಲ್ಬೆಟ್ಟು ನಿವಾಸಿ ಸದಾಶಿವ ಶೆಟ್ಟಿ(60) ಎಂಬವರು ಜೂ.23ರಂದು ಮದ್ಯಾಹ್ನ ಮನೆಯಿಂದ ಮಂಗಳೂರಿನ ಗುರುಪುರ ಕೈಕಂಬದ ಕೊಂಪೆಪದವಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈ ವರೆಗೂ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.