ಬಾಲಕಿ ನಾಪತ್ತೆ
ಮಣಿಪಾಲ, ಜೂ.28: ಪೆರಂಪಳ್ಳಿ ಹೆವನ್ ಲಾಡ್ಜ್ ಎದುರಿನ ನಿವಾಸಿ ವೀಣಾ ಎಂಬವರ ಪುತ್ರಿ ಪುಷ್ಪ(15) ಎಂಬಾಕೆ ಜೂ. 25ರಂದು ರಾತ್ರಿ ಮನೆಯಿಂದ ಹೋದವಳು ನಾಪತ್ತೆಯಾಗಿದ್ದಾಳೆ.
ಈಕೆ ಓದಿನ ವಿಚಾರವಾಗಿ ಬೈದ ಕಾರಣಕ್ಕೆ ಮನೆಯಿಂದ ಹೋಗಿರಬಹುದು ಅಥವಾ ಅವಳನ್ನು ಯಾರೋ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರ ಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story





