ರಸ್ತೆ ಅಪಘಾತ: ಬೈಕ್ ಸವಾರನಿಗೆ ಗಾಯ
ಉಪ್ಪಿನಂಗಡಿ, ಜೂ. 28: ಇಲ್ಲಿಗೆ ಸಮೀಪದ ಅಮೈ ಪೆಟ್ರೋಲ್ ಪಂಪು ಬಳಿ ಬೈಕ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದೆ. ಘಟನೆಯಿಂದ ಬೈಕ್ ಸವಾರ ಉಪ್ಪಿನಂಗಡಿ ಮೇಲ್ತಡ್ಕ ನಿವಾಸಿ ಶಶಿಧರ (25) ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರು. ಈ ಸಂದರ್ಭ ಹಾಸನದಿಂದ ವಿಟ್ಲ ಕೆಲಿಂಜದ ಮನೆಗೆ ಕಾರಿನಲ್ಲಿ ಹೋಗುತ್ತಿದ್ದ ಮಂಗಳೂರಿನ ಎಂ.ಫ್ರೆಂಡ್ಸ್ ಟ್ರಸ್ಟಿ ಸಿದ್ದೀಕ್ ಮಸ್ಕತ್ ಅವರು ಗಾಯಾಳು ಶಶಿಧರನನ್ನು ತನ್ನ ಕಾರಿನಲ್ಲಿ ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಢಿಕ್ಕಿಯಾದ ಕಾರು ಚಾಲಕ ಕರಾಯ ನಿವಾಸಿ ಸಮದ್ ಎಂದು ಗುರುತಿಸಲಾಗಿದ್ದು, ಕಾರಿನಲ್ಲಿ ಅಸೌಖ್ಯದಲ್ಲಿದ್ದ ಅವರ ತಾಯಿಯಿದ್ದು, ಅವರನ್ನು ಮನೆಗೆ ಬಿಟ್ಟು ಆಸ್ಪತ್ರೆಗೆ ತೆರಳುವುದಾಗಿ ಸಮದ್ ತಿಳಿಸಿದ್ದಾರೆ.
ಶಶಿಧರ ಅವರ ಬೈಕ್ ವಿರುದ್ಧ ದಿಕ್ಕಿನಲ್ಲಿ ಚಲಿಸಿರುವುದು ಅಪಘಾತಕ್ಕೆ ಕಾರಣವೆನ್ನಲಾಗಿದೆ.
Next Story





