ಜಾನುವಾರು ಮಾರಾಟ-ಖರೀದಿ ನಿಷೇಧ ಅಧಿಸೂಚನೆ : ಮಧ್ಯಂತರ ಆದೇಶ ವಿಸ್ತರಣೆಗೆ ಮನವಿ

ಮಧುರೈ, ಜೂ. 28: ಜಾನುವಾರು ಮಾರಾಟ ಹಾಗೂ ಖರೀದಿ ನಿಷೇಧಿಸಿ ಕೇಂದ್ರ ಸರಕಾರ ಮೇ 23ರಂದು ಹೊರಡಿಸಿದ ಅಧಿಸೂಚನೆಗೆ ಮದ್ರಾಸ್ ಉಚ್ಚ ನ್ಯಾಯಾಲಯ ಕಳೆದ ತಿಂಗಳು ನೀಡಿದ ಮಧ್ಯಂತರ ತಡೆಯಾಜ್ಞೆಯನ್ನು ಬುಧವಾರ ನಾಲ್ಕು ವಾರ ವಿಸ್ತರಿಸಿದೆ.
ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯದ ಪರವಾಗಿ ಅಫಿದಾವಿತ್ ಸಲ್ಲಿಸಲು ಕಾಲಾವಕಾಶ ನೀಡುವಂತೆ ಕೋರಿ ಕೇಂದ್ರ ಸರಕಾರವನ್ನು ಪ್ರತಿನಿಧಿಸುತ್ತಿರುವ ನ್ಯಾಯವಾದಿ ಕೋರಿದ ಬಳಿಕ ನ್ಯಾಯಮೂರ್ತಿ ಎ. ಸೆಲ್ವಂ ಹಾಗೂ ಆದಿನಾಥನ್ ಒಳಗೊಂಡ ವಿಭಾಗೀಯ ನ್ಯಾಯಪಿೀಠ ಈ ಮಧ್ಯಂತರ ಆದೇಶ ನೀಡಿದೆ.
ಒಂದು ತಿಂಗಳು ಮಿತ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ. ಆದುದರಿಂದ ಮಧ್ಯಂತರ ತಡೆಯಾಜ್ಞೆ ವಿಸ್ತರಿಸಬೇಕು ಎಂದು ದೂರುದಾರರ ಪರ ವಕೀಲ ಮುಹಮ್ಮದ್ ಆರಿಫ್ ಮನವಿ ಮಾಡಿದ್ದಾರೆ.
Next Story





