ಮಹಿಳೆಯರ ವಿಶ್ವಕಪ್ ಕ್ರಿಕೆಟ್: ಇಂಗ್ಲೆಂಡ್‌ಗೆ ಪಾಕ್ ವಿರುದ್ಧ 107 ರನ್‌ಗಳ ಜಯ

ಲಂಡನ್, ಜೂ.27: ಮಹಿಳೆಯರ ವಿಶ್ವಕಪ್ ಕ್ರಿಕೆಟ್‌ನ ಐದನೆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರೂ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ತಂಡ ಡಕ್‌ವರ್ಥ್ ಲೂವಿಸ್ ನಿಯಮದಂತೆ 107 ರನ್‌ಗಳ ಭರ್ಜರಿ ಜಯ ಗಳಿಸಿದೆ.
ಗೆಲುವಿಗೆ 378 ರನ್‌ಗಳ ಕಠಿಣ ಸವಾಲನ್ನು ಪಡೆದ ಪಾಕಿಸ್ತಾನ ತಂಡ 29.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 107 ರನ್ ಗಳಿಸಿದ್ದಗ ಮಳೆ ಕಾಣಿಸಿಕೊಂಡು ಆಟ ಸ್ಥಗಿತಗೊಂಡಿತು. ಬಳಿಕ ಆಟ ಆರಂಭಗೊಳ್ಳಲಿಲ್ಲ.
ಪಾಕಿಸ್ತಾನ ಡಿಎಲ್ ನಿಯಮದಂತೆ 29.5 ಓವರ್‌ಗಳಲ್ಲಿ 215 ರನ್ ಗಳಿಸಬೇಕಿತ್ತು. ಆದರೆ ಪಾಕಿಸ್ತಾನ 107 ಗಳಿಸಿದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಗೆಲುವಿನ ನಗೆ ಬೀರಿತು.
ಪಾಕಿಸ್ತಾನದ ಆರಂಭಿಕ ಆಟಗಾರ್ತಿ ಆಯೆಷಾ ಝಾಪರ್ ಔಟಾಗದೆ 56ರನ್, ನೈನ್ ಅಬ್ದಿ ಔಟಾಗದೆ 23 ರನ್ ಗಳಿಸಿದರು. ಪಾಕಿಸ್ತಾನ ಬ್ರಂಟ್ (21ಕ್ಕೆ 2) ಮತ್ತು ಹಾರ್ಟಿಲೆ (13ಕ್ಕೆ 1) ದಾಳಿಗೆ ಸಿಲುಕಿ 17.2 ಓವರ್‌ಗಳಲ್ಲಿ 67ಕ್ಕೆ 3 ವಿಕೆಟ್ ಕಳೆದುಕೊಂಡಿತ್ತು.
ನಾಹಿದಾ ಖಾನ್ (3), ಜವೇರಿಯಾ ಖಾನ್(11), ಅಸ್ಮಾವಿಯಾ ಇಕ್ಬಾಲ್(5) ಬೇಗನೆ ಔಟಾದರು. ನಾಲ್ಕನೆ ವಿಕೆಟ್‌ಗೆ ಆಯೆಷಾ ಮತ್ತು ಅಬ್ದಿ ಮುರಿಯದ ಜೊತೆಯಾಟದಲ್ಲಿ 40 ರನ್ ಗಳಿದ್ದಾಗ ಮಳೆ ಕಾಣಿಸಿಕೊಂಡು ಆಟ ಸ್ಥಗಿತಗೊಂಡಿತು.
ಇದಕ್ಕೂ ಮೊದಲು ಟಾಸ್ ಸೋತ ಇಂಗ್ಲೆಂಡ್‌ನ ಮಹಿಳೆಯರ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 377 ರನ್ ಗಳಿಸಿತ್ತು.
ನಾಯಕಿ ಹೀದರ್ ನೈಟ್ (106) ಮತ್ತು ಸ್ಕೈವೆರ್(137) ಶತಕ , ವೈಟ್ (ಔಟಾಗದೆ 42 ), ವಿಲ್ಸನ್ (33 )ಗಳಿದ ಉಪಯುಕ್ತ ಕೊಡುಗೆಯ ನೆರವಿನಲ್ಲಿ ಇಂಗ್ಲೆಂಡ್ ಕಠಿಣ ಸವಾಲು ದಾಖಲಿಸಿತ್ತು.
ಸಂಕ್ಷಿಪ್ತ ಸ್ಕೋರ್ ವಿವರ
ಇಂಗ್ಲೆಂಡ್ 50 ಓವರ್‌ಗಳಲ್ಲಿ 377/3(ಹೀದರ್ ನೈಟ್ 106, ಸ್ಕೈವೆರ್ 137; ಅಸ್ಮಾವಿ ಇಕ್ಬಾಲ್ 62ಕ್ಕೆ 3, ಕೈನಾತ್ ಇಂಮ್ತಿಯಾಝ್ 68ಕ್ಕೆ 2).
ಪಾಕಿಸ್ತಾನ 29.2 ಓವರ್‌ಗಳಲ್ಲಿ 107/3( ಆಯೆಷಾ ಝಾಪರ್ ಔಟಾಗದೆ 56, ಅಬ್ದಿ ಔಟಾಗದೆ 23; ಬ್ರಂಟ್ 21ಕ್ಕೆ 2).







