ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ತೆಲಂಗಾಣದ ಸಿಂಧುಜಾ ರೆಡ್ಡಿ

ಹೈದರಬಾದ್, ಜೂ.28: ಹೈದರಾಬಾದ್ ಅಂಡರ್ -19 ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿದ್ದ ತೆಲಂಗಾಣದ ಸಿಂಧುಜಾ ರೆಡ್ಡಿ ಅಮೆರಿಕದ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
26ರ ಹರೆಯದ ಸಿಂಧುಜಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಅಮೆರಿಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ನಲಗುಂದಾ ಜಿಲ್ಲೆಯ ಅಮಾಂಗಲ್ ಗ್ರಾಮದ ಸಿಂಧುಜಾ ಅವರು ಮುಂಬರುವ ಆಗಸ್ಟ್‌ನಲ್ಲಿ ಸ್ಕಾಟ್ಲೆಂಡ್‌ನಲ್ಲಿ ನಡೆಯಲಿರುವ ವರ್ಲ್ಡ್ ಕಪ್ ಟ್ವೆಂಟಿ-20 ವಿಶ್ವಕಪ್‌ಗೆ ಅಮೆರಿಕ ತಂಡದಲ್ಲಿರುತ್ತಾರೆ.ಇತ್ತೀಚೆಗೆ ಸಿದ್ಧಾರ್ಥ ರೆಡ್ಡಿಯನ್ನು ವಿವಾಹಗವಾಗಿ ಅಮೆರಿಕದಲ್ಲಿ ನೆಲೆಸಿರುವ ಸಿಂಧುಜಾ ಅವರು 2020ರ ಐಸಿಸಿ ವರ್ಲ್ಡ್ ಕಪ್‌ನಲ್ಲಿ ಅಮೆರಿಕ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.
ಬಿ.ಟೆಕ್ ಮತ್ತು ಎಂಬಿಎ ಪದವೀಧರೆ ಸಿಂಧುಜಾ ಮದುವೆಯಾದ ಬಳಿಕ ಅಮೆರಿಕದಲ್ಲಿ ನೆಲೆಸಿದ್ದಾರೆ.ಆರಂಭಿಕ ಆಟಗಾರ್ತಿ ಸಿಂಧುಜಾ ಅವರು ಅಮೆರಿಕದಲ್ಲಿ ಕ್ರಿಕೆಟ್‌ನಲ್ಲಿ ಹೊಸ ಬದುಕನ್ನು ರೂಪಿಸಲಿದ್ದಾರೆ.
ಸ್ಥಳೀಯ ಕ್ಲಬ್‌ಗಳಲ್ಲಿ ಆಡುತ್ತಿದ್ದ ಸಿಂಧುಜಾರಲ್ಲಿ ಪ್ರತಿಭೆಯನ್ನು ಗುರುತಿಸಿ ಅಲ್ಲಿನ ಆಯ್ಕೆ ಸಮಿತಿಯು ಸಿಂಧುಜಾರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿದೆ.





