ಹಿಲ್ಸ್‌ಬರೋ ಕ್ರೀಡಾಂಗಣ ದುರಂತ: ಆರು ಜನರ ವಿರುದ್ಧ ಆರೋಪ

ಲಂಡನ್,ಜೂ.28: 1989ರಲ್ಲಿ ಶೆಫೀಲ್ಡ್‌ನ ಹಿಲ್ಸ್‌ಬರೋ ಫುಟ್ಬಾಲ್ ಕ್ರೀಡಾಂಗಣ ದಲ್ಲಿ ಲಿವರ್‌ಪೂಲ್ ಮತ್ತು ನಾಟಿಂಗ್‌ಹ್ಯಾಂ ಫಾರೆಸ್ಟ್ ತಂಡಗಳ ನಡುವೆ ಎಫ್‌ಎ ಕಪ್ ಸೆಮಿಫೈನಲ್ ಪಂದ್ಯ ನಡೆಯುತ್ತಿದ್ದಾಗ ನೂಕುನುಗ್ಗಲಿನಿಂದಾಗಿ ಸಂಭವಿಸಿದ್ದ ದುರಂತಕ್ಕೆ ಸಂಬಂಧಿಸಿದಂತೆ ಬ್ರಿಟನ್ ಸರಕಾರಿ ಅಭಿಯೋಜಕರು ಆರು ಜನರ ವಿರುದ್ಧ ಕ್ರಿಮಿನಲ್ ಆರೋಪಗಳನ್ನು ಹೊರಿಸಿದ್ದಾರೆ. ದೇಶದ ಅತ್ಯಂತ ಭೀಕರ ಕ್ರೀಡಾ ದುರಂತವೆಂದು ಪರಿಗಣಿಸಲಾಗಿರುವ ಈ ಘಟನೆಯಲ್ಲಿ ಲಿವರ್‌ಪೂಲ್ ತಂಡದ 96 ಬೆಂಬಲಿಗರು ಮೃತಪಟ್ಟಿದ್ದರು.
ದುರಂತದ ದಿನ ಕ್ರೀಡಾಂಗಣದಲ್ಲಿ ಪೊಲೀಸ್ ಕಾರ್ಯಾಚರಣೆಗಳ ಹೊಣೆ ಹೊತ್ತಿದ್ದ ಮಾಜಿ ಪೊಲೀಸ್ ಮುಖ್ಯ ಅಧೀಕ್ಷಕ ಸೇರಿದಂತೆ ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳು, ಪೊಲೀಸ್ ಪರ ಓರ್ವ ನ್ಯಾಯವಾದಿ ಮತ್ತು ಕ್ರೀಡಾಂಗಣದ ಸುರಕ್ಷತಾ ಅಧಿಕಾರಿಗಳು ಆರೋಪಿಗಳಲ್ಲಿ ಸೇರಿದ್ದಾರೆ.
ಪ್ರಕರಣದ ವಿಚಾರಣೆ ಆ.9ರಂದು ಆರಂಭವಾಗಲಿದೆ.
Next Story





