ಕೈಲ್ ಹೋಪ್, ಸುನೀಲ್ ಅಂಬ್ರೀಸ್ ವಿಂಡೀಸ್ ತಂಡಕ್ಕೆ ಸೇರ್ಪಡೆ

ಪೋರ್ಟ್ ಆಫ್ ಸ್ಪೇನ್, ಜೂ.28: ಭಾರತದ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 0-1 ಅಂತರದಲ್ಲಿ ಹಿನ್ನಡೆ ಅನುಭವಿಸಿರುವ ವೆಸ್ಟ್‌ಇಂಡೀಸ್ ತಂಡ ಮುಂದಿನ ಮೂರು ಏಕದಿನ ಪಂದ್ಯಗಳಿಗೆ 13 ಮಂದಿ ಆಟಗಾರರ ತಂಡವನ್ನು ಆಯ್ಕೆ ಮಾಡಲಾಗಿದ್ದು, ಕೈಲ್ ಹೋಪ್ ಮತ್ತು ಸುನೀಲ್ ಅಂಬ್ರೀಸ್‌ಗೆ ತಂಡದಲ್ಲಿ ಸ್ಥಾನ ನೀಡಿದೆ.
ತಂಡದಲ್ಲಿ ಸ್ಥಾನ ಪಡೆದಿರುವ ಕೈಲ್ ಹೋಪ್ ಅವರು ವಿಂಡೀಸ್ ತಂಡದ ವಿಕೆಟ್ ಕೀಪರ್ ಶಾಯಿ ಹೋಪ್ ರ ಸಹೋದರ.ಟ್ರಿನಿಡಾಡ್ ಮತ್ತು ಟೊಬಾಗೊ ತಂಡವನ್ನು ದೇಶಿಯ ಟೂರ್ನಿಗಳಲ್ಲಿ ಕೈಲ್ ಹೋಪ್‌ನಾಯಕರಾಗಿ ಮುನ್ನಡೆಸುತ್ತಿದ್ದಾರೆ. ಅಂಬ್ರೀಸ್ ವಿಂಡ್ವಾರ್ಡ್ ಐಲ್ಯಾಂಡ್ ತಂಡದ ವಿಕೆಟ್ ಕೀಪರ್ ಆಗಿದ್ದಾರೆ.
ಕೈಲ್ ವಿಂಡೀಸ್ ‘ಎ’ ತಂಡದಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡು ಉತ್ತಮ ಪ್ರದರ್ಶನ ನೀಡಿದ್ದರು. ಪಿಸಿಎಲ್ ಟೂರ್ನಿಯಲ್ಲಿ ಟ್ರೀನಿಡಾಡ್ ಆ್ಯಂಡ್ ಟೊಬಾಗೊ ರೆಡ್ ಫೋರ್ಸ್ ಫಾಂಚೈಸಿ ತಂಡದಲ್ಲಿ ಮಿಂಚಿದ್ದರು. ಅಬ್ರೀಸ್ ವಿಂಡ್ವಾರ್ಡ್ ತಂಡದ ಪರ ಪಿಸಿಎಲ್ ಪ್ರಥಮ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಚೆನ್ನಾಗಿ ಆಡಿದ್ದರು.
ಭಾರತ ಮೂರನೇ ಏಕದಿನವನ್ನು ಶುಕ್ರವಾರ ಪೋರ್ಟ್ ಆಫ್ ಸೇನ್‌ನಲ್ಲಿ ಆಡಲಿದೆ. ನಾಲ್ಕನೆ ಮತ್ತು ಐದನೆ ಏಕದಿನ , ಏಕೈಕ ಟ್ವೆಂಟಿ- 20 ಪಂದ್ಯವನ್ನು ಜಮೈಕಾದಲ್ಲಿ ಆಡಲಿದೆ.
ಭಾರತ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಎರಡನೆ ಏಕದಿನ ಪಂದ್ಯದಲ್ಲಿ 105 ರನ್‌ಗಳ ಜಯ ಗಳಿಸಿತ್ತು. ಮೊದಲ ಪಂದ್ಯ ಮಳೆಗಾಹುತಿಯಾಗಿತ್ತು.
ವೆಸ್ಟ್‌ಇಂಡೀಸ್ ತಂಡ: ಜೇಸನ್ ಹೋಲ್ಡರ್(ನಾಯಕ), ಸುನೀಲ್ ಅಂಬ್ರೀಸ್, ದೇವೆಂದ್ರ ಬಿಶೂ, ರೋಸ್ಟನ್ ಚೇಸ್, ಮಿಗ್ಯುಲ್ ಕಮಿನ್ಸ್, ಕೈಲ್ ಹೋಪ್, ಶಾಯಿ ಹೋಪ್, ಅಲ್ಝಾರಿ ಜೋಸೆಫ್, ಎವಿನ್ ಲೆವಿಸ್, ಜೇಸನ್ ಮುಹಮ್ಮದ್ ,ಅಶ್ಲೇ ನರ್ಸ್, ಕೀರನ್ ಪೋವೆಲ್, ರೊವ್‌ಮ್ಯಾನ್ ಪೋವೆಲ್







