ಶಾಲಾ ವಿದ್ಯಾರ್ಥಿಗಳಿಗೆ ಪರಿಕರದ ಕೊಡುಗೆ

ಮೂಡುಬಿದಿರೆ, ಜೂ.29: ಕಲಿತ ಶಾಲೆಯನ್ನು ಸದಾ ಸ್ಮರಿಸಿ ಚೆನ್ನಾಗಿ ಕಲಿತು ಉತ್ತಮ ಅಂಕ ಪಡೆದು ಜೀವನದಲ್ಲಿ ಯಶಸ್ಸುಗಳಿಸಿ ಎಂದು ಶಾಲಾ ಹಳೆ ವಿದ್ಯಾರ್ಥಿ, ಲೆಕ್ಕಪರಿಶೋಧಕ ಬೆಂಗಳೂರಿನ ಧೀರಜ್ ಶೆಣೈ ಹೇಳಿದರು.
ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ 295 ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಪುಸ್ತಕ, ಲೇಖನ ಸಾಮಾಗ್ರಿ, ಪಾದರಕ್ಷೆಗಳನ್ನು ಗುರುವಾರ ವಿತರಿಸಿ ಅವರು ಮಾತನಾಡಿದರು.
ಈ ಕಾರ್ಯಕ್ಕೆ ಬೆಂಗಳೂರಿನ ಸುರೇಂದ್ರ ಜಿ.ಕಾಮತ್, ಋಷಿಕೇಶ್, ಮುಂಬೈಯ ಸುರೇಖ ಶೆಣೈ ಅವರಿಗೆ ಸಹಾಯಹಸ್ತ ನೀಡಿದ್ದರು. ಪಾದರಕ್ಷೆ ವಿತರಣೆಗೆ ಬೆಂಗಳೂರಿನ ಭವಾನಿ ಕಾಫಿ ವರ್ಕ್ಸ್ ಕೊಡುಗೆ ನೀಡಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಪದ್ಮಜಾ ಅಧ್ಯಕ್ಷತೆ ವಹಿಸಿ, ಕೊಡುಗೆ ನೀಡಿದ ಧೀರಜ್ ಶೆಣೈ ಮತ್ತು ಬಳಗಕ್ಕೆ ಅಭಿನಂದನೆ ಸಲ್ಲಿಸಿದರು.
Next Story