ಪತ್ರಕರ್ತ ರವಿಬೆಳಗೆರೆ ಬಂಧನಕ್ಕೆ ಸ್ಪೀಕರ್ ತಡೆ

ಬೆಂಗಳೂರು, ಜೂ.29: ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತ್ರಕರ್ತ ರವಿಬೆಳಗೆರೆಯನ್ನು ಬಂಧಿಸದಂತೆ ಪೊಲೀಸರಿಗೆ ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ ಸೂಚನೆ ನೀಡಿದ್ದಾರೆ.
ಹಕ್ಕು ಬಾಧ್ಯತಾ ಸಮಿತಿಯು ಪತ್ರಕರ್ತರಾದ ರವಿಬೆಳಗೆರೆ ಹಾಗೂ ಅನಿಲ್‌ರಾಜ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ.ದಂಡ ವಿಧಿಸಿತ್ತು. ಅದರಂತೆ, ಇಬ್ಬರನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು.
ಪತ್ರಕರ್ತರಿಗೆ ವಿಧಿಸಿರುವ ಜೈಲು ಶಿಕ್ಷೆಯನ್ನು ತಡೆ ಹಿಡಿಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಮನವಿಗೆ ಸ್ಪಂದಿಸಿ, ರವಿಬೆಳಗೆರೆಯನ್ನು ಬಂಧಿಸದಂತೆ ಸ್ಪೀಕರ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
Next Story





