ಹೊರ ಗುತ್ತಿಗೆ ಆಧಾರದ ನೌಕರರ ಖಾಯಮಾತಿಗೆ ಆಗ್ರಹ
ಮಂಗಳೂರು, ಜೂ. 29: ಕಳೆದ 20ರಿಂದ 25 ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆ, ಸುರತ್ಕಲ್ ಉಪಮಹಾನಗರ ಪಾಲಿಕೆ, ಕದ್ರಿ ಉಪಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಒಳಚರಂಡಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವ 156 ಮಂದಿ ಕಾರ್ಮಿಕರನ್ನು ಖಾಯಂಗೊಳಿಸಿ ಸರಕಾರಕ್ಕೆ ಪತ್ರ ಬರೆಯಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ವತಿಯಿಂದ ಗುರುವಾರ ಮೇಯರ್ ಕವಿತಾ ಸನಿಲ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮಹಾಪೌರರು ಕೂಡಲೇ ಅಧಿಕಾರಿಗಳ ಮತ್ತು ಮನಪಾ ಸದಸ್ಯರ ಸಭೆ ಕರೆದು ಒಳಚರಂಡಿ ವಿಭಾಗದಲ್ಲಿ ದುಡಿಯುತ್ತಿರುವ ಕಾರ್ಮಿಕರ ಹೊರಗುತ್ತಿಗೆಯನ್ನು ರದ್ದುಪಡಿಸಿ, ತಕ್ಷಣ ಸರಕಾರಕ್ಕೆ ಪತ್ರ ಬರೆದು ಖಾಯಂ ನೌಕರರೆಂದು ಆದೇಶಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದೆ.
ಕಾರ್ಮಿಕರ ಬೇಡಿಕೆ 10 ದಿನಗಳೊಳಗೆ ಈಡೇರದಿದ್ದಲ್ಲಿ ನೌಕರರು ಕೆಲಸ ಸ್ಥಗಿತಗೊಳಿಸಿ ಬೇಡಿಕೆ ಈಡೇರುವವರೆಗೆ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಸುವುದಾಗಿ ಸಮಿತಿಯ ಮಂಗಳೂರು ತಾಲೂಕು ಸಂಚಾಲಕ ಜಗದೀಶ್ ಪಾಂಡೇಶ್ವರ ಎಚ್ಚರಿಕೆ ನೀಡಿದ್ದಾರೆ.
Next Story





