ಜಮ್ಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಆರ್ಥಿಕ ನೆರವು
ಒಂದು ಪ್ರಕರಣ ಕೊನೆಗೊಳಿಸಲು ಎನ್‌ಐಎ ನಿರ್ಧಾರ

ಜಮ್ಮು-ಕಾಶ್ಮೀರ, ಜೂ. 29: ಜಮ್ಮು-ಕಾಶ್ಮೀರದಲ್ಲಿ ಕಲ್ಲು ಎಸೆಯುವವರಿಗೆ ಭಯೋತ್ಪಾದಕರು ಆರ್ಥಿಕ ನೆರವು ನೀಡಿರುವ ಬಗ್ಗೆ ಯಾವುದೇ ಪುರಾವೆ ಲಭ್ಯವಾಗಿಲ್ಲ. ಎಲ್ಲ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗಿದೆ. ಎಲ್ಲ ವ್ಯವಹಾರಗಳೂ ಕಾನೂನು ಬದ್ಧವಾಗಿದೆ. ಆದುದರಿಂದ ಈ ಬಗೆಗಿನ ಎರಡು ಪ್ರಕರಣಗಳಲ್ಲಿ ಒಂದು ಪ್ರಕರಣದ ತನಿಖೆ ಕೊನೆಗೊಳಿಸುವುದು ಉತ್ತಮ ಎಂದು ರಾಷ್ಟ್ರೀಯ ತನಿಾ ಸಂಸ್ಥೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಭಯೋತ್ಪಾದಕರು ಆರ್ಥಿಕ ನೆರವು ನೀಡುತ್ತಿದ್ದಾರೆ ಎಂದು ಆರೋಪಿಸಿ ಸರಕಾರ ಕಾಶ್ಮೀರಿ ಪ್ರತ್ಯೇಕತಾವಾದಿಗಳ ವಿರುದ್ಧ ಹಲವು ಪ್ರಕರಣ ದಾಖಲಿಸಿ ಕಳೆದ ವರ್ಷ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ಆರಂಭಿಸಿತ್ತು ಎಂದು ಅವರು ಹೇಳಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯಾದಿ ಬಳಿಕ ಕಾಶ್ಮೀರ ಕಣಿವೆಯ ಬೀದಿಗಳಲ್ಲಿ ಪ್ರತಿಭಟನೆಗಳು ನಡೆದಿದ್ದುವು. ಈ ಸಂದರ್ಭ ಕಾಶ್ಮೀರ ಕಣಿವೆಯಲ್ಲಿ ಅಶಾಂತಿ ಸೃಷ್ಟಿಸಲು ಭಯೋತ್ಪಾದಕರು ಆರ್ಥಿಕ ನೆರವು ನೀಡಿರುವ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ಆರಂಭಿಸಿತ್ತು. ಗಡಿಯಾಚೆಗಿಂದ ಆರ್ಥಿಕ ನೆರವು ಬರುತ್ತಿದ್ದು, ಇದನ್ನು ಉಗ್ರಗಾಮಿ ಅಥವಾ ಪ್ರತ್ಯೇಕತಾವಾದಿಗಳ ಶಂಕಿತ ಖಾತೆ ಮೂಲಕ ಕಲ್ಲು ಎಸೆಯುವವರಿಗೆ ನೀಡಲಾಗುತ್ತಿದೆ ಎಂದು ಶಂಕಿಸಲಾಗಿತ್ತು. ಈ ಬ್ಯಾಂಕ್ ಖಾತೆಗಳ ಎಲ್ಲ ವ್ಯವಹಾರಗಳು ನ್ಯಾಯಬದ್ದವಾಗಿವೆ. ಭಯೋತ್ಪಾದನೆಗೆ ಭಯೋತ್ಪಾದಕರ ಹಣಕಾಸು ನೆರವಿಗೂ ಇದಕ್ಕೂ ಯಾವುದೇ ್ಲ ಸಂಬಂಧವಿಲ್ಲ ಎಂದು ಈಗ ತನಿಖೆ ಸಂಸ್ಥೆ ಹೇಳಿದೆ.







