ಉಡುಪಿ, ಜೂ.29: ಉಡುಪಿ ನಗರ ಸಭೆಯಲ್ಲಿ ನಡೆದ ಅಸಹ್ಯಕರವಾದ ಗೂಂಡಾಗಿರಿ ಖಂಡನೀಯ. ನಗರಸಭೆಯ ಸದಸ್ಯರೊಬ್ಬರ ಸಮಸ್ಯೆಯನ್ನು ಹೇಳಲು ಸದನಕ್ಕೆ ಬಂದ ನಾಗರಿಕರೊಬ್ಬರ ಮೇಲೆ ಹಲ್ಲೆ ನಡೆಸಿರುವುದು ಸರಿಯಲ್ಲ.
ಹಲ್ಲೆ ನಡೆಸಿದ ಸದಸ್ಯರು ಸಾರ್ವಜನಿಕರ ಕ್ಷಮೆ ಕೋರಬೇಕೆಂದು ಸಿಪಿಎಂ ಉಡುಪಿ ತಾಲೂಕು ಕಾರ್ಯದರ್ಶಿ ವಿಠಲ ಪೂಜಾರಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.