ಚೆಂಡು ಕತರ್ ಅಂಗಳದಲ್ಲಿ: ಈಜಿಪ್ಟ್ ವಿದೇಶ ಸಚಿವ

ಕೈರೋ, ಜೂ. 29: ಅರಬ್ ಬಿಕ್ಕಟ್ಟು ವಿವಾದ ಈಗ ಕತರ್ ನ್ಯಾಯಾಲಯದಲ್ಲಿದ್ದು, ಅರಬ್ ರಾಷ್ಟ್ರೀಯ ಭದ್ರತೆಯನ್ನು ಕಾಯ್ದುಕೊಂಡು ಬರುವುದೇ ಅಥವಾ ಬಾಹ್ಯ ಶಕ್ತಿಗಳಿಗೆ ಪೂರಕವಾಗಿ ಅದನ್ನು ದುರ್ಬಲಗೊಳಿಸುವುದೇ ಎನ್ನುವುದನ್ನು ಅದು ನಿರ್ಧರಿಸಬೇಕಾಗಿದೆ ಎಂದು ಈಜಿಪ್ಟ್ ವಿದೇಶ ಸಚಿವ ಸಮೇಹ್ ಶುಕ್ರಿ ಹೇಳಿದ್ದಾರೆ.
ತಮ್ಮ ಬೇಡಿಕೆಗಳಿಗೆ ಪ್ರತಿಕ್ರಿಯಿಸಲು ಯುಎಇ, ಸೌದಿ ಅರೇಬಿಯ, ಬಹರೈನ್ ಮತ್ತು ಈಜಿಪ್ಟ್ ದೇಶಗಳು ಕತರ್‌ಗೆ ನೀಡಿರುವ 10 ದಿನಗಳ ಗಡುವು ಮುಗಿಯುತ್ತಾ ಬಂದಿದ್ದರೂ ಬಿಕ್ಕಟ್ಟು ಹಾಗೆಯೇ ಇದೆ ಎಂದು ಅವರು ಹೇಳಿರುವುದಾಗಿ ‘ಮಿಡಲ್ ಈಸ್ಟ್ ನ್ಯೂಸ್ ಏಜನ್ಸಿ’ ಹೇಳಿದೆ.
Next Story





