ದ.ಕ.ದಲ್ಲಿ ಮಳೆಯ ಪ್ರಮಾಣ ಕಡಿಮೆ
ಮಂಗಳೂರು, ಜೂ. 29: ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿದೆ. ಕಳೆದ ವರ್ಷದಲ್ಲಿ ಇದೇ ಅವಧಿಯಲ್ಲಿ 1027.7 ಮಿ.ಮೀ ಮಳೆಯಾಗಿದ್ದರೆ, ಈ ಅವಧಿಯಲ್ಲಿ 1011.5 ಮಳೆಯಾಗಿದ್ದು, 16.2 ಮಿ.ಮೀ. ಕಡಿಮೆಯಾಗಿದೆ.
ಅಲ್ಲದೆ, ವಾಡಿಕೆ ಮಳೆಯ ಪ್ರಮಾಣದಲ್ಲೂ ಕಡಿಮೆಯಾಗಿದೆ. ಒಟ್ಟು 1176.2 ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿದ್ದು, 6 ತಿಂಗಳ ಅವಧಿಯಲ್ಲಿ ಈ ಬಾರಿ ವರದಿಯಾದ ಮಳೆಯ ಪ್ರಮಾಣವನ್ನು ಹೋಲಿಸಿದರೆ ವಾಡಿಕೆ ಮಳೆಗಿಂತ 164.7 ಮಿ.ಮೀ. ಮಳೆ ಕಡಿಮೆಯಾಗಿದೆ.
ಗುರುವಾರದ ಮಳೆಯ ಪ್ರಮಾಣ ಜೂ. 29ರಂದು ಜಿಲ್ಲೆಯಲ್ಲಿ ಬಿದ್ದಿರುವ ಮಳೆಯ ಪ್ರಮಾಣ ಹೀಗಿದೆ.
ಬಂಟ್ವಾಳ 32.0 ಮಿ.ಮೀ., ಬೆಳ್ತಂಗಡಿ 43.8 ಮಿ.ಮೀ., ಮಂಗಳೂರು 44.2, ಪುತ್ತೂರು 46.8, ಸುಳ್ಯ 25.6 ಸಹಿತ ಒಟ್ಟು 38.5 ಮಿ.ಮೀ. ಮಳೆಯಾಗಿದೆ. ಆದರೆ, ಕಳೆದ ವರ್ಷದ ಜೂ. 29ರಂದು ಬಂಟ್ವಾಳ 103.5 ಮಿ.ಮೀ., ಬೆಳ್ತಂಗಡಿ 125.5, ಮಂಗಳೂರು 71.9, ಪುತ್ತೂರು 117.5, ಸುಳ್ಯ 122.5 ಮಿ.ಮೀ. ಸಹಿತ ಒಟ್ಟು 108.1 ಮಳೆಯಾಗಿತ್ತು.
Next Story





