ಕೇಂದ್ರದ ಜಿಎಸ್ ಟಿ “ಅರೆಬೆಂದ ಸುಧಾರಣಾ ಕ್ರಮ”: ರಾಹುಲ್ ಗಾಂಧಿ ಟೀಕೆ

ಹೊಸದಿಲ್ಲಿ, ಜೂ.30: ಕೇಂದ್ರ ಸರಕಾರ ಶುಕ್ರವಾರ ರಾತ್ರಿ ಜಾರಿಗೆ ತರಲುದ್ದೇಶಿಸಿರುವ ಸರಕು ಮತ್ತು ಸೇವಾತೆರಿಗೆ (ಜಿಎಸ್ ಟಿ)ಯ ಬಗ್ಗೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, “ಇದೊಂದು ತಮಾಷೆಯಾಗಿದ್ದು, ಅರೆಬೆಂದ ರೀತಿಯಲ್ಲಿ “ಸ್ವಯಂ ಪ್ರಚಾರದ ಪ್ರದರ್ಶನಕ್ಕಾಗಿ” ಅರೆಬೆಂದ ಸುಧಾರಣಾ ಕ್ರಮವನ್ನು ಜಾರಿಗೆ ತರಲಾಗುತ್ತಿದೆ ಎಂದಿದ್ದಾರೆ.
ಜಿಎಸ್ ಟಿಯನ್ನು ಸೂಕ್ಷ್ಮತೆಯಿಲ್ಲದೆ, ಯೋಜನೆಯಿಲ್ಲದೆ, ಮುಂದಾಲೋಚನೆಯಿಲ್ಲದೆ ನೋಟು ಅಮಾನ್ಯದಂತೆ ಜಾರಿಗೆ ತರಲಾಗುತ್ತಿದೆ. ಒಂದು ಉತ್ತಮ ಸುಧಾರಣೆಯನ್ನು ಅರೆಬೆಂದ ರೀತಿಯಲ್ಲಿ ಸ್ವಯಂ ಪ್ರಚಾರದ ಪ್ರದರ್ಶನಕ್ಕಾಗಿ ಕೇಂದ್ರ ಸರಕಾರ ಜಾರಿಗೆ ಮುಂದಾಗಿದೆ” ಎಂದವರು ಟ್ವೀಟ್ ಮಾಡಿದ್ದಾರೆ.
Next Story





