ಜು.2: ಮಾಧ್ಯಮಗಳಲ್ಲಿ ಮಹಿಳೆ ಸಂವಾದ
ಬೆಂಗಳೂರು, ಜೂ.30: ಮಾಧ್ಯಮಗಳಲ್ಲಿ ಮಹಿಳೆಯರ ಸ್ಥಿತಿಗತಿಗಳ ಕುರಿತು ‘ಸಿದ್ಧ ಮಾದರಿ ಒಡೆಯೋಣ ಪರ್ಯಾಯ ಮಾದರಿ ಕಟ್ಟೋಣ’ ಎಂಬ ಶೀರ್ಷಿಕೆಯಡಿ ಜು.2ರಂದು ನಗರದ ಶಾಸಕರ ಭವನ-2ರಲ್ಲಿ ಮಧ್ಯಾಹ್ನ 3ಕ್ಕೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಜನವಾದಿ ಮಹಿಳಾ ಸಂಘಟನೆಯ ಮಾಧ್ಯಮ ಉಪಸಮಿತಿಯ ಸಂಚಾಲಕಿ ಮಂಜಿತ್ ರತಿ ಪ್ರಸ್ತಾವನೆ ನುಡಿಗಳನ್ನಾಡಲಿದ್ದಾರೆ. ಜನವಾದಿ ಮಹಿಳಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ಮಾಲಿನಿ ಭಟ್ಟಾಚಾರ್ಯ ಭಿತ್ತಿಚಿತ್ರ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಲೋಕಸಭಾ ಸದಸ್ಯೆ ಪಿ.ಕೆ.ಶ್ರೀಮತಿ ಕೈಪಿಡಿ ಬಿಡುಗಡೆ ಮಾಡಲಿದ್ದಾರೆ.
ಇನ್ನು ಸಂವಾದದಲ್ಲಿ ಪತ್ರಕರ್ತರಾದ ಎಸ್.ಆರ್.ಆರಾಧ್ಯ(ಉದಯ ಟಿವಿ), ಟಿ.ಐ.ಪ್ರದೀಪ್(ಪ್ರಜಾ ಟಿವಿ), ಬಿ.ಕೆ.ಗಣೇಶ್(ಉದಯವಾಣಿ), ಪಾರ್ವತೀಶ್ ಬಿಳಿದಾಳೆ(ವಾರ್ತಾಭಾರತಿ), ಸನತ್‌ಕುಮಾರ್ ರೈ(ಸುದ್ದಿ ಟಿವಿ), ಪೂರ್ಣಿಮಾ(ಬಿ ಟಿವಿ), ಎ.ಎಸ್.ರಮಾಕಾಂತ್(ಈ ಟಿವಿ), ಮಾಲತಿ ಭಟ್(ಪ್ರಜಾವಾಣಿ), ಭಾರತಿ ಹೆಗಡೆ(ವಿಜಯವಾಣಿ), ಎಚ್.ಎನ್.ಆರತಿ(ದೂರದರ್ಶನ), ಭಾವನ(ಸುವರ್ಣ ನ್ಯೂಸ್), ಮೇರಿ ಜೋಸೆಫ್(ವಿಜಯ ಕರ್ನಾಟಕ), ಭಾರತಿ(ಸಂಯುಕ್ತ ಕರ್ನಾಟಕ) ಹಾಗೂ ಶಾಂತಲಾ(ಕಸ್ತೂರಿ ಮಾಸ ಪತ್ರಿಕೆ) ಭಾಗವಹಿಸಲಿದ್ದಾರೆ.
ಈ ಸಂವಾದ ಕಾರ್ಯಕ್ರಮವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಲೇಖಕಿಯರ ಸಂಘ ಹಾಗೂ ಬೆಂಗಳೂರು ವಿಶ್ವ ವಿದ್ಯಾಲಯ ಇಂಗ್ಲಿಷ್ ಟೀಚರ್ಸ್ ಅಸೋಸಿಯೇಷನ್ ಜಂಟಿಯಾಗಿ ಸಂಘಟಿಸುತ್ತಿವೆ.
ಈ ವೇಳೆ ಲೇಖಕಿಯರ ಸಂಘದ ಡಾ.ವಸುಂಧರಾ ಭೂಪತಿ, ಆಶಾ ಹೆಗಡೆ, ಉಷಾ ಕಟ್ಟೆಮನೆ, ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್.ವಿಮಲಾ, ಕೆ.ಎಸ್.ಲಕ್ಷ್ಮಿ ಮತ್ತಿತರರು ಭಾಗವಹಿಸುತ್ತಿದ್ದಾರೆ.







