ಬಿಜೆಪಿ ಸಭೆ : ಪಕ್ಷ ಸಂಘಟನೆ ಬಗ್ಗೆ ಸಮಾಲೋಚನೆ

ಪುತ್ತೂರು,ಜೂ.30 : ಪುತ್ತೂರು ತಾಲ್ಲೂಕಿನ ಕೋಡಿಂಬಾಡಿ ಗ್ರಾಮ ಪಂಚಾಯತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯು ಶುಕ್ರವಾರ ಗುಂಡೋಲೆ ರಾಮಣ್ಣ ಗೌಡ ಅವರ ಮನೆಯಲ್ಲಿ ನಡೆಯಿತು. ಸಭೆಯಲ್ಲಿ ಪಕ್ಷ ಸಂಘಟನೆಯ ಕುರಿತು ಸಮಾಲೋಚಿಸಲಾಯಿತು.
ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ವಿಸ್ತಾರಕ ಸುಕೇಶ್ ಶೆಟ್ಟಿ ಮೂಡಬಿದ್ರೆ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಸಮಿತಿಯ ಪ್ರಧಾನ ಕಾರ್ರದರ್ಶಿ ಕೇಶವ ಬಜತ್ತೂರು, ಜಿಲ್ಲಾ ಪಂಚಾಯತ್ ಸದಸ್ಯೆ ಶಯನಾ ಜಯಾನಂದ್, ತಾಲೂಕು ಪಂಚಾಯತ್ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಜಯಾನಂದ್, ಕೋಡಿಂಬಾಡಿ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಪ್ರದೀಪ್ ಶೆಟ್ಟಿ,ಕಾರ್ಯದರ್ಶಿ ಮೋಹನ್ ಪಕಳ , ಗ್ರಾಮ ಪಂಚಾಯತ್ ಅಧ್ಯಕ್ಷೆ ಸಂಧ್ಯಾ ಕೈಲಾಜೆ, ಬಿಜೆಪಿ ಮುಖಂಡರಾದ ರಾಮಣ್ಣ ಗುಂಡೋಲೆ, ಬಾಬು ಗೌಡ ಭಂಡಾರದ ಮನೆ, ಮನೋಹರ ಡಿ.ವಿ, ರಾಮಚಂದ್ರ ಪೂಜಾರಿ ಶಾಂತಿನಗರ, ಭವ್ಯ ಶೆಟ್ಟಿ ಗುತ್ತಿನಮನೆ, ಲಿಂಗಪ್ಪ ಕಾಪಿಕಾಟು, ಜಯಪ್ರಕಾಶ್ ದೇವಸ್ಯ, ಜನಾರ್ದನ ಕೋಡಿ ಮತ್ತಿತರರು ಉಪಸ್ಥಿತರಿದ್ದರು.





