ರಾಜ್ಯದಲ್ಲಿ 1,000 ಮೆ.ವ್ಯಾ ಸೌರವಿದ್ಯುತ್ ಉತ್ಪಾದನೆ: ಪ್ರಮೋದ್

ಕೋಟ, ಜೂ.30: ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ 1,000 ಮೆಗಾ ವ್ಯಾಟ್ ವಿದ್ಯುತ್‌ನ್ನು ಸೌರಶಕ್ತಿಯಿಂದ ಉತ್ಪಾದಿಸಿ ರಾಜ್ಯದ ಗ್ರಿಡ್‌ಗೆ ನೀಡಲಾಗುತ್ತಿದೆ. ಇನ್ನೊಂದು ವರ್ಷದಲ್ಲಿ ಇನ್ನೂ 2,000 ಮೆಗಾವ್ಯಾಟ್ ಸೌರವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ ಎಂದು ರಾಜ್ಯ ಯುವ ಸಬಲೀಕರಣ, ಮೀನುಗಾರಿಕಾ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಆರ್ಬ್ ಎನರ್ಜಿ ಸಂಸ್ಥೆ, ಕೋಟದ ಜನತಾ ಫಿಶ್‌ಮಿಲ್ ಎಂಡ್ ಆಯಿಲ್ ಪ್ರಾಡಕ್ಟ್‌ನಲ್ಲಿ ಅಳವಡಿಸಿದ 500ಕಿಲೋ ವಾಟ್ ಸಾಮರ್ಥ್ಯದ ಸೌರಶಕ್ತಿ ಮೇಲ್ಛಾವಣಿ ವ್ಯವಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಆರ್ಬ್ ಎನರ್ಜಿ ಸಂಸ್ಥೆ, ಕೋಟದ ಜನತಾ ಫಿಶ್‌ಮಿಲ್ ಎಂಡ್ ಆಯಿಲ್ ಪ್ರಾಡಕ್ಟ್‌ನಲ್ಲಿ ಅಳವಡಿಸಿದ 500ಕಿಲೋ ವಾಟ್ ಸಾಮರ್ಥ್ಯದ ಸೌರಶಕ್ತಿ ಮೇಲ್ಛಾವಣಿ ವ್ಯವಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಸೌರಶಕ್ತಿ ವಿದ್ಯುತ್ ಸ್ವಚ್ಛ, ಮಾಲಿನ್ಯರಹಿತ ಹಾಗೂ ಕನಿಷ್ಠ ವೆಚ್ಚದ ವಿದ್ಯುತ್ ಆಗಿದ್ದು, ರಾಜ್ಯದಲ್ಲಿ ಒಟ್ಟು 3000 ಮೆ.ವ್ಯಾಟ್ ವಿದ್ಯುತ್‌ನ್ನು ಸೌರಶಕ್ತಿಯಿಂದ ಉತ್ಪಾದಿಸುವ ಗುರಿ ಇದೆ. ಅತೀ ಶೀಘ್ರದಲ್ಲಿ ರಾಜ್ಯವನ್ನು ವಿದ್ಯುತ್‌ನಲ್ಲಿ ಸ್ವಾವಲಂಬಿ ರಾಜ್ಯವನ್ನಾಗಿಸುವ ಉದ್ದೇಶ ನಮ್ಮ ಸರಕಾರದ್ದಾಗಿದೆ ಎಂದು ಸಚಿವರು ನುಡಿದರು.
ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಬೇಸಿಗೆಯನ್ನು ‘ಪವರ್ ಕಟ್’ ಇಲ್ಲದೇ ಕಳೆದಿದೆ. ಪರಿಸರಕ್ಕೆ ಹಾಗೂ ಜನರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ವಿದ್ಯುತ್ ಉತ್ಪಾದನೆಗೆ ಹಾಗೂ ಭವಿಷ್ಯದಲ್ಲಿ ಸೌರವಿದ್ಯುತ್‌ನ್ನು ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.
ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಆರ್ಬ್ ಎನರ್ಜಿ ಸಂಸ್ಥೆಯ ಸಿಇಓ ಡಾ.ಡೆಮಿಯನ್ ಮಿಲ್ಲರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮೆಸ್ಕಾಂನ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರತಾಪ್‌ಚಂದ್ರ, ಜನತಾ ಫಿಶ್‌ಮಿಲ್‌ನ ಪಾಲುದಾರ ರಕ್ಷಿತ್ ಕುಂದರ್ ಉಪಸ್ಥಿಔತರಿದ್ದರು.







