ಕೊಹ್ಲಿ, ಆಮ್ಲ, ಡಿ ಕಾಕ್ ದಾಖಲೆ ಢಮಾರ್: ವಿಶ್ವದಾಖಲೆ ಮಾಡಿದ ಮಹಿಳಾ ಕ್ರಿಕೆಟ್ ಆಟಗಾರ್ತಿ !

ಹೊಸದಿಲ್ಲಿ, ಜೂ.30: ಏಕದಿನ ಕ್ರಿಕೆಟ್ ನಲ್ಲಿ ಅತೀ ವೇಗದ 11 ಶತಕಗಳನ್ನು ಸಿಡಿಸಿ ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ನೂತನ ದಾಖಲೆಯನ್ನು ನಿರ್ಮಿಸಿದ್ದು, ಕೊಹ್ಲಿ. ಹಾಶಿಮ್ ಅಮ್ಲ ಹಾಗೂ ಡಿ ಕಾಕ್ ರ ದಾಖಲೆಗಳನ್ನು ಮುರಿದಿದ್ದಾರೆ.
ಮಹಿಳಾ ವಿಶ್ವಕಪ್ ನ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಲ್ಯಾನಿಂಗ್ ತನ್ನ 11ನೆ ಶತಕವನ್ನು ಸಿಡಿಸಿದರು. ಈ ಮೂಲಕ ಮಹಿಳಾ ಕ್ರಿಕೆಟ್ ನ ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ದಾಖಲೆಯನ್ನೂ ನಿರ್ಮಿಸಿದರು.
ಹಾಶಿಮ್ ಅಮ್ಲ 64 ಇನ್ನಿಂಗ್ಸ್ ಗಳಲ್ಲಿ, ಡಿ ಕಾಕ್ 65 ಇನ್ನಿಂಗ್ಸ್ ಗಳಲ್ಲಿ ಹಾಗೂ ಕೊಹ್ಲಿ 82 ಇನ್ನಿಂಗ್ಸ್ ಗಳಲ್ಲಿ 11 ಶತಕಗಳನ್ನು ಸಿಡಿಸಿದ್ದರೆ, ಮೆಗ್ ಕೇವಲ 59 ಇನ್ನಿಂಗ್ಸ್ ಗಳಲ್ಲಿ 11 ಶತಕಗಳನ್ನು ಪೂರೈಸುವ ಮೂಲಕ ಈ ದಾಖಲೆಗಳನ್ನು ಮುರಿದರು.
Next Story





