ವಿದ್ಯಾರ್ಥಿ ವೇತನ ಮತ್ತು ಈದ್ ಫ್ಯಾಮಿಲಿ ಮೀಟ್ ಕಾರ್ಯಕ್ರಮ

ಉಪ್ಪಿನಂಗಡಿ, ಜೂ.30:ಅತೂರು ಬಿ.ಕೆ. ಫ್ಯಾಮಿಲಿ ವೆಲ್ಫೇರ್ ಅಸೋಷಿಯೇಶನ್ ಹಾಗೂ ಜಿ.ಸಿ.ಸಿ. ಯುನಿಟ್ ವತಿಯಿಂದ ವಿದ್ಯಾರ್ಥಿ ವೇತನ ಮತ್ತು ಈದ್ ಫ್ಯಾಮಿಲಿ ಮೀಟ್ ಇತ್ತೀಚೆಗೆ ಬದ್ರಿಯಾ ಜುಮಾ ಮಸಿದಿ ಹಾಲ್ ನಲ್ಲಿ ನಡೆಯಿತು.
ಬಿ.ಕೆ. ಎಫ್.ಡಬ್ಲ್ಯು.ಎ. ಗೌರವಾಧ್ಯಕ್ಷ ಬಿ.ಕೆ ಮುಹಮ್ಮದ್ ಹಾಜಿ ಕುಂಡಾಜೆ ಕಾರ್ಯಕ್ರಮ ಉದ್ಘಾಟಿಸಿದರು. ಟಿ ಆರ್ ಎಫ್ ಸಂಚಾಲಕ ಹಾಜಿ ರಫೀಕ್ ಮಾಸ್ಟರ್ ಎಜುಕೇಷನಲ್ ಸ್ಕಾಲರ್‌ಶಿಪ್ ಮತ್ತು ಇನ್ನಿತರ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಶ್ರೀರಂಗ ಪಟ್ಟಣ ಪ್ರಥಮ ದರ್ಜೆ ಕಾಲೇಜ್ ನ ಪ್ರೊಫೆಸರ್ ಹಾಜಿ ಮುಹಮ್ಮದ್ ಮುಸ್ತಫಾ ಶಿಕ್ಷಣದ ಪ್ರಾಮುಖ್ಯತೆಯನ್ನು ತಿಳಿಸಿದರು.
ಈ ಸಂದರ್ಭ ಬಿ.ಕೆ. ಫ್ಯಾಮಿಲಿ ವೆಲ್ಫೇರ್ ಅಸೋಸಿಯೇಶನ್ ಹಾಗೂ ಜಿ.ಸಿ.ಸಿ ಯುನಿಟ್ ವತಿಯಿಂದ ಬಿ.ಕೆ ಫ್ಯಾಮಿಲಿಯ ಪ್ರತಿಭಾನ್ವಿತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸ್ಕಾಲರ್‌ಶಿಪ್ ನೀಡಲಾಯಿತು.
ಅಬ್ದುಲ್ ಅಝೀಝ್ ಬಿ.ಕೆ ಅಧ್ಯಕ್ಷೀಯ ಭಾಷಣ ಮಾಡಿದರು. ಅಬ್ದುಲ್ ಮಜೀದ್ ಬಿ.ಕೆ. ಸ್ವಾಗತಿಸಿದರು. ಇಮ್ರಾನ್ ಬಿ.ಕೆ ಕಾರ್ಯಕ್ರಮವನ್ನು ನಿರೂಪಿಸಿದರು. ಬದ್ರುದ್ದೀನ್ ಬಿ.ಕೆ. ವಂದಿಸಿದರು.





