ಮಕ್ಕಳು ಗಿಡ ನೆಡುವ ಹವ್ಯಾಸ ಬೆಳೆಸಿಕೊಳ್ಳಿ: ನ್ಯಾ.ವೆಂಕಟೇಶ್

ಉಡುಪಿ, ಜೂ.30: ಮಕ್ಕಳು ಬಾಲ್ಯದಿಂದಲೇ ಗಿಡ ನೆಡುವ ಹವ್ಯಾಸ ಬೆಳಸಿಕೊಳ್ಳುವುದರಿಂದ ಪರಿಸರ ಮತ್ತು ಅರಣ್ಯದ ಸಂರಕ್ಷಣೆ ಸಾಧ್ಯವಾಗಲಿದೆ ಎಂದು ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ್ ನಾಯ್ಕ ಟಿ. ತಿಳಿಸಿದ್ದಾರೆ.
ಗಿಡ ಮರಗಳು ದೈವೀ ಸ್ವರೂಪ. ಮಕ್ಕಳು ಬಾಲ್ಯದಿಂದಲೇ ಗಿಡಮರಗಳ ಮೇಲೆ ಪ್ರೀತಿ ಬೆಳೆಸಿಕೊಂಡು ಮನೆಯ ಸುತ್ತಮುತ್ತ ಕನಿಷ್ಠ 2 ಗಿಡಗಳನ್ನಾದರೂ ನೆಟ್ಟು ಪೋಷಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅರಣ್ಯನಾಶದಿಂದ ಮಳೆ ಕೊರತೆ ಉಂಟಾಗಿ ಬರ ಪರಿಸ್ಥಿತಿ ಎಲ್ಲೆಡೆ ಕಂಡು ಬರುತ್ತಿದೆ. ಇದಕ್ಕೆ ಪರಿಸರ ನಾಶವೇ ಕಾರಣ. ಪರಿಸರ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದವರು ನುಡಿದರು.

ರಜಾ ಸಮಯದಲ್ಲಿ ಮೊಬೈಲ್, ಇಂಟರ್‌ನೆಟ್‌ಗಳಲ್ಲಿ ಮುಳುಗದೆ ಅರಣ್ಯ ವೀಕ್ಷಣೆ, ಚಾರಣದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ರಜಾ ಸಮಯದಲ್ಲಿ ಮೊಬೈಲ್, ಇಂಟರ್‌ನೆಟ್‌ಗಳಲ್ಲಿ ಮುಳುಗದೆ ಅರಣ್ಯ ವೀಕ್ಷಣೆ, ಚಾರಣದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಲತಾ ಮಾತನಾಡಿ, ಇಂದಿನ ಆಧುನಿಕ ಜಗತ್ತಿನ ಬೆಳವಣಿಗೆಯಲ್ಲಿ ಪರಿಸರವನ್ನು ಮರೆಯುತ್ತಿದ್ದೇವೆ. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದರ ಮೂಲಕ ಆರೋಗ್ಯಕರ ಪರಿಸರ ನಿರ್ಮಾಣ ಸಾಧ್ಯ. ಮಕ್ಕಳು ಪರಿಸರ ಪ್ರೀತಿ ಬೆಳೆಸಿಕೊಳ್ಳಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಲತಾ ಮಾತನಾಡಿ, ಇಂದಿನ ಆುನಿಕಜಗತ್ತಿನಬೆಳವಣಿಗೆಯಲ್ಲಿಪರಿಸರವನ್ನುಮರೆಯುತ್ತಿದ್ದೇವೆ.ಮಕ್ಕಳಲ್ಲಿಪರಿಸರಪ್ರಜ್ಞೆಮೂಡಿಸುವುದರಮೂಲಕಆರೋಗ್ಯಕರಪರಿಸರನಿರ್ಮಾಣಸ್ಯಾ. ಮಕ್ಕಳು ಪರಿಸರ ಪ್ರೀತಿ ಬೆಳೆಸಿಕೊಳ್ಳಬೇಕು ಎಂದರು. ನ್ಯಾಯಾಧೀಶರಾದ ಇರ್ಫಾನ್, ಮಂಜುನಾಥ್, ರಾಮ್‌ಪ್ರಸಾದ್ ಹಾಗೂ ಸೈಂಟ್ ಸಿಸಿಲೀಸ್ ಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಪ್ರೀತಿ ಕ್ರಾಸ್ತಾ ಉಪಸ್ಥಿತರಿದ್ದರು.
ಉಡುಪಿ ವಲಯ ಅರಣ್ಯಾಧಿಕರಿ ಕ್ಲಿಫರ್ಡ್ ಲೋಬೋ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಿಕ್ಷಕ ಮಧುಕೇಶ್ವರ್ ಹೆಗಡೆ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆ ವತಿಯಿಂದ ಶಾಲಾ ಮಕ್ಕಳಿಗೆ ವಿವಿಧ ಜಾತಿಯ ಗಿಡಗಳನ್ನು ವಿತರಿಸಲಾಯಿತು.