ಸಿಕ್ಕಿಂಗೆ ಸೇನಾಪಡೆ ಮುಖ್ಯಸ್ಥ ರಾವತ್ ಭೇಟಿ

ಗ್ಯಾಂಗ್‌ಟಕ್, ಜೂ.30: ಸೇನಾಪಡೆಯ ಮುಖ್ಯಸ್ಥ ಜ. ಬಿಪಿನ್ ರಾವತ್ ಗುರುವಾರ ಸಿಕ್ಕಿಂಗೆ ಭೇಟಿ ನೀಡಿ , ಗಡಿಭಾಗದ ಪರಿಸ್ಥಿತಿಯ ಅವಲೋಕನ ನಡೆಸಿದರು.
ಅವರು ಭದ್ರತಾ ವ್ಯವಸ್ಥೆಯ ಪರಿಶೀಲನೆ ನಡೆಸಿದ ಬಳಿಕ ಗಡಿಪ್ರದೇಶದ ಕೆಲವು ಮುಂಚೂಣಿ ನೆಲೆಗಳಿಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಕ್ಕಿಂ ಗಡಿಭಾಗದಲ್ಲಿ ಭಾರತೀಯ ಸೇನೆ ಮತ್ತು ಚೀನಾದ ಸೇನೆಯ ಮಧ್ಯೆ ಇತ್ತೀಚೆಗೆ ತಳ್ಳಾಟ ನಡೆದಿತ್ತು. ಸಿಕ್ಕಿಂ ಪ್ರದೇಶದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿದ ಚೀನಾದ ಪಡೆಗಳು ಗಡಿದಾಟಿ ಬಂದು ಡೋಕ್ಲಾ ಪ್ರದೇಶದಲ್ಲಿ ಭಾರತೀಯ ಸೇನೆ ಸ್ಥಾಪಿಸಿದ್ದ ಎರಡು ತಾತ್ಕಾಲಿಕ ಬಂಕರ್‌ಗಳನ್ನು ನಾಶಗೊಳಿಸಿತ್ತು.
Next Story