ಗಾಂಜಾ ಸಹಿತ ಆರೋಪಿ ಸೆರೆ
ಮಂಗಳೂರು, ಜೂ. 30: ನಗರದ ಜೈಲ್‌ರೋಡ್ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪಿಯನ್ನು ಶುಕ್ರವಾರ ಬರ್ಕೆ ಪೊಲೀಸರು ಬಂಧಿಸಿ ಸುಮಾರು 30,000 ರೂ. ವೌಲ್ಯದ 1.120 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ಕಡಿರುದ್ಯಾವರದ ಅಜು ಸನಿಲ್ (24) ಬಂಧಿತ ಆರೋಪಿ. ಈತ ಜೈಲ್‌ರೋಡ್‌ನ ಬಳಿಯಿರುವ ಪಶು ವೈದ್ಯಕೀಯ ಚಿಕಿತ್ಸಾಲಯದ ಹತ್ತಿರ ಬೈಕ್‌ನಲ್ಲಿ ಗಾಂಜಾವನ್ನಿರಿಸಿ ಮಾರಾಟ ಮಾಡಲು ಯತ್ನಿಸಿದ್ದ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
Next Story





