15 ದಿನದೊಳಗೆ ರೈತರ ಖಾತೆಯಲ್ಲಿ ಸಾಲಮನ್ನಾದ ಹಣ ಕಾಂಗ್ರೆಸ್ ಜಮಾಮಾಡಲಿ : ವಿ.ಎಸ್.ಪಾಟೀಲ

ಮುಂಡಗೋಡ,ಜೂ.30 : 15 ದಿನದೊಳಗೆ ರೈತರ ಖಾತೆಯಲ್ಲಿ ಸಾಲಮನ್ನಾದ ಹಣ ಕಾಂಗ್ರೆಸ್ ಜಮಾ ಮಾಡುತ್ತಾರೆ ಎನ್ನುವುದಾದರೆ ತಾವು ಕೇಂದ್ರ ಸರಕಾರದ ಒತ್ತಡ ಹಾಕಿ ಕೇಂದ್ರ ಸರಕಾರದಿಂದ ಸಾಲಮನ್ನಾ ಕುರಿತು ಪ್ರಯತ್ನಿಸುವುದಾಗಿ ಮಾಜಿ ಶಾಸಕ ವಿ.ಎಸ್ ಪಾಟೀಲ, ಕಾಂಗ್ರೆಸ್ ಗೆ ಸವಾಲು ಹಾಕಿದರು.
ಇಲ್ಲಿಯ ಖಾಸಗಿ ಹೊಟೆಲ್ ವೊಂದರಲ್ಲಿ ಶಾಸಕರು ಬೆಳೆವಿಮೆ ಬಂದಿರುವ ಕುರಿತು ಮಾಹಿತಿ ನೀಡಲು ಪತ್ರಿಕಾಗೋಷ್ಟಿ ಏರ್ಪಡಿಸಿದ ಸಂದರ್ಭದಲ್ಲಿ ಮೇಲಿನಂತೆ ಸವಾಲು ಹಾಕಿದರು.
ಮುಂಡಗೋಡ ತಾಲೂಕಿಗೆ 20ಕೋಟಿ 76 ಲಕ್ಷ 8 ಸಾವಿರ ರೂ. ಬೆಳವಿಮೆ ಬಂದಿದೆ ಅಂದರೆ ಸುಮಾರು 38% ಬೆಳೆವಿಮೆ ಬಂದಿದೆ. ಇದು ತಾಲೂಕಿಗೆ ಬಂದಿರುವ ಬಹಳ ಕಡಿಮೆ, ತಾಲೂಕಿನ ಗ್ರಾ.ಪಂ ಗಳಿಗೆ ಈ ರೀತಿ ಬೆಳೆವಿಮೆ ಮಂಜೂರಾಗಿದೆ ಬಾಚಣಕಿ 18.5%, ಬೆಡಸ್‍ಗಾಂವ 23.1% , ಚೌವಡಳ್ಳಿ 60.3%, ಚಿಗಳ್ಳಿ 1.8%, ಗುಂಜಾವತಿ 56.7%, ಹುನಗುಂದ 9.2%, ಇಂದೂರ 38.9% ,ಕಾತೂರ 42.2%, ಕೊಡಂಬಿ 89.4%, ಮೈನಳ್ಳಿ 58.8%, ಮಳಗಿ ಗ್ರಾ.ಪಂ 47%, ಮುಂಡಗೋಡ 39%, ನಾಗನೂರು 13.2%, ನಂದಿಕಟ್ಟಾ ಗ್ರಾ.ಪಂ 55.6% , ಓಣಿಕೇರಿ ಗ್ರಾ.ಪಂ 34.2% , ಪಾಳಾ ಗ್ರಾ.ಪಂ 64.1%, ಸಾಲಗಾಂವ ಗ್ರಾ.ಪಂ ಗೆ 33.5% ಮಂಜೂರಾಗಿದೆ. ಇದು ತಾಲೂಕಿಗೆ ಬಂದಿರುವ ಅತಿ ಕಡಿಮೆ ಕ್ಷೇತ್ರದ ಶಾಸಕರು ಈ ಅಧಿಕಾರಿಗಳಿಗೆ ಸರಿಯಾಗಿ ಮಾಹಿತಿ ನೀಡುತ್ತಿದ್ದರೆ ಹೆಚ್ಚಿನ ಬೆಳೆವಿಮೆ ಕ್ಷೇತ್ರಕ್ಕೆ ಬರುತ್ತಿತ್ತು ಇದು ಶಾಸಕರು ರೈತರ ಕುರಿತು ನಿಷ್ಕಾಳಜಿ ಎತ್ತಿತೋರಿಸುತ್ತದೆ ಎಂದರು.
ಕಾಂಗ್ರೆಸ್ ಸರಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದೆ. ಅನ್ನಭಾಗ್ಯ ಎಂದು ವಿತರಿಸುವ ಅಕ್ಕಿ ಕೇಂದ್ರ ಸರಕಾರದ್ದು, ಅನ್ನ ಕೇಂದ್ರ ಸರಕಾರದು ಭಾಗ್ಯ ಮಾತ್ರ ರಾಜ್ಯ ಸರಕಾರದ್ದು ಎಂದು ಲೇವಡಿ ಮಾಡಿದರು.
ಈ ಸಂದರ್ಭದಲ್ಲಿ ಬಿ.ಎಮ್.ರಾಯ್ಕರ, ಬಸವರಾಜ ಹರಿಜನ, ರವಿ ಪಾಟೀಲ ಕೆಂಜೋಡಿ ಗಲಿಬಿ ಮುಂತಾದವರು ಉಪಸ್ಥಿತರಿದ್ದರು





